International

ನೋಡ ನೋಡುತ್ತಿದ್ದಂತೆ ಪ್ರಾಣ ಕಳೆದುಕೊಂಡು ಆಕಾಶದಿಂದ ಕೆಳಗೆ ಬಿದ್ದ ನೂರಾರು ಹಕ್ಕಿಗಳು

ಮೆಕ್ಸಿಕೋ:  ಆಕಾಶದಲ್ಲಿ ಸಂತೋಷದಿಂದ ಗುಂಪು ಗುಂಪು ಹಾರುತ್ತಿದ್ದ ಹಕ್ಕಿಗಳ ಹಿಂಡುಬ ಇದ್ದಕ್ಕಿದ್ದಂತೆ ಕೆಳಗಿ ಬಿದ್ದು ಸಾವನ್ನಪ್ಪಿರವ ವಿಷದನೀಯ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಬಾನಿನಲ್ಲಿ ಹಾರಾಡುತ್ತಿದ್ದ ಹಳದಿ ತಲೆಯ ಕಪ್ಪು ಹಕ್ಕಿಗಳ ಹಿಂಡು ಚಿಹೋವಾದಲ್ಲಿ ಮನೆಯೊಂದರ ಬಳಿ ಸತ್ತು ಬಿತ್ತಿವೆ. ಹಿಂಡಿನಲ್ಲಿದ್ದ ಬಹುತೇಕ ಹಕ್ಕಿಗಳು ಸ್ವಲ್ಪ ಸಮಯದ ನಂತರ ಹಾರಿಹೋದವು. ಆದರೆ ನೂರಾರು ಪಕ್ಷಿಗಳು ರಸ್ತೆಯುದ್ದಕ್ಕೂ ಸತ್ತು ಬಿದ್ದಿವೆ.

ಸೋಮವಾರ (ಫೆಬ್ರವರಿ 14,2022) ಬೆಳಗ್ಗೆ 8.20ಕ್ಕೆ ನಡೆದ ಈ ಅನಿರೀಕ್ಷಿತ ಘಟನೆಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸತ್ತು ಬಿದ್ದಿರುವ ಪಕ್ಷಿಗಳನ್ನು ನೋಡಿ ಮಮ್ಮಲ ಮರುಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಶುವೈದ್ಯರು ಕೂಡ ಹಕ್ಕಿಗಳ ಸಾವಿಗೆ ಹಲವಾರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪಕ್ಷಿಗಳು ವಿಷಕಾರಿ ಅನಿಲವನ್ನು ಉಸಿರಾಡಿರಬಹುದು ಅಥವಾ  ಹೈ-ಟೆನ್ಶನ್ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಪಕ್ಷಿಗಳ ನಿಗೂಢ ಸಾವಿಗೆ 5G ಕೂಡ ಕಾರಣವಾಗಿರಬಹುದು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಿಗಳ ಸಾವಿನ ಕುರಿತ ಫೋಟೋ ವೈರಲ್ ಆಗಿದೆ.

Share Post