International

ಮಂಜುಗಡ್ಡೆಯಿಂದ ಶಿಲೆಯಾಗಿ ನಿಂತ ಜಿಂಕೆ

ಖಜಕಿಸ್ಥಾನ: ಚಳಿಗಾಲದಲ್ಲಿ ನಮಗೆ ಮನೆಯಿಂದ ಹೊರಬರಲು ಸಾಧ್ಯವಿಲ್ಲ. ಆದ್ರೆ ಖಜಕಿಸ್ತಾನದ ಸ್ಥಿತಿ ನೆನಸಿಕೊಂಡ್ರೆ ಒಮ್ಮೆಲೆ ದಿಗ್ಬ್ರಮೆ ಉಂಟಾಗುತ್ತೆ. ಮಾನವನ ರಕ್ತ ಗಡ್ಡೆ ಕಟ್ಟುವ ದಟ್ಟ ಮಂಜಿನಿಂದ ಆವೃತ್ತವಾಗಿದೆಯಂತೆ. ಉಷ್ಣಾಂಶ ಅತ್ಯಂತ ತಳಮಟ್ಟದಲ್ಲಿದೆ ಇಂತಹ ಪರಿಸ್ಥಿತಿಯಲ್ಲಿ ಮಾನವ ಹೇಗೊ ಬೆಡ್‌ಶೀಟ್‌, ಸ್ವೆಟರ್‌, ಗ್ಲೌಸ್‌ ಮೊದಲಾದವುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ತಾನೆ.

ಆದ್ರೆ ಪ್ರಾಣಿಗಳ ಗತಿ ಏನು? ಈ ಬಗ್ಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಸ್ತೆಯಲ್ಲಿ ಆರಾಮಾಗಿ ಎಗರಾಡುತ್ತಿದ್ದ ಜಿಂಕೆ ಇದ್ದಕ್ಕಿದ್ದಂತೆ ಮಂಜುಗಡ್ಡೆಯಾಗಿ ನಿಂತು ಬಿಟ್ಟಿದೆ. ಇದನ್ನು ನೋಡಿದ್ರೆ ಎಂಥವರ ಮನಸ್ಸು ಕರಗುತ್ತದೆ. ಆದ್ರೆ ಅಲ್ಲೇ ಸ್ಥಳದಲ್ಲಿದ್ದ ಇದ್ದ ಒಬ್ಬ ವ್ಯಕ್ತಿ ಜಿಂಕೆಯನ್ನಿಡಿದು. ಅದರ ಮೂತಿ ಹಾಗೂ ದೇಹಕ್ಕೆ ಅಂಟಿಕೊಂಡಿದ್ದ ಮಂಜುಗಡ್ಡೆಯನ್ನು ತೆಗೆದಿದ್ದಾನೆ. ಇದರಿಂದ ಜಿಂಕೆಗೆ ಸ್ವಲ್ಪ ಆರಾಮೆನಿಸಿ ಮತ್ತೆ ಎಗರಾಡುತ್ತಾ ತೆರಳಿದೆ.

Share Post