Sports

ಪ್ಯಾಟ್‌ ಕಮಿನ್ಸ್‌ ಎರಡನೇ ಟೆಸ್ಟ್‌ ಇಂದ ಔಟ್‌

ಅಡಿಲೇಡ್‌ : ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಆಶಸ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಕೋವಿಡ್‌ ೧೯ ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕ ಹೊಂದಿದ್ದ ಪ್ಯಾಟ್‌ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದಿಂದ ಕೈ ಬಿಟ್ಟಿದೆ.

ಈ ಕುರಿತು ಆಸ್ಟ್ರೇಲಿಯಾ ಕ್ರಿಕೆಟ್‌ ಬೋರ್ಡ್‌ ಅಧಿಕೃತ ಮಾಹಿತಿಯನ್ನು ತಮ್ಮ ಟ್ವಿಟ್ಟರ್‌ ಖಾತೆಯ ಮೂಲಕ ಹೊರಹಾಕಿದೆ. ಪಂದ್ಯ ಶುರುವಾಗಲು ಕೆಲವೇ ಗಂಟೆ ಬಾಕಿ ಉಳಿದಿರುವ ಸಮಯದಲ್ಲಿ ಈ ನಿರ್ಧಾರ ಕೈಗೊಂಡಿದೆ.

ಕಮಿನ್ಸ್‌ ಅನುಪಸ್ಥಿತಿಯಲ್ಲಿ ಸ್ಟೀವ್‌ ಸ್ಮಿತ್‌ ತಂಡವನ್ನು ಮುನ್ನಡೆಸಲಿದ್ದಾರೆ. ಮೈಕಲ್‌ ನೆಸ್ಸೆರ್‌ ಅವರನ್ನು ಕಮಿನ್ಸ್‌ ಜಾಗಕ್ಕೆ ಕರೆತರಲಾಗಿದೆ.

Share Post