Sports

ಮೊದಲ ದಿನದ ಅಂತ್ಯಕ್ಕೆ ಭಾರತ 258ಕ್ಕೆ 4

ಬೆಂಗಳೂರು : ಕಾನ್ಪುರದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ಮೊದಲನೇ ದಿನವಾದ ಇಂದು ಭಾರತ ನಾಲ್ಕು ವಿಕೆಟ್‌ ನಷ್ಟಕ್ಕೆ ೨೫೮ ರನ್‌ ಗಳಿಸಿದೆ.

ಡೆಬ್ಯೂ ಪಂದ್ಯದಲ್ಲಿಯೇ ಅರ್ಧಶತಕ ಪೂರೈಸಿ ಶತಕದತ್ತ ದಾಪುಗಾಲಿಡುತ್ತಿದ್ದಾರೆ ಶ್ರೇಯಸ್‌ ಅಯ್ಯರ್.

ಶ್ರೇಯಸ್‌ ೭೫ ಮತ್ತು ರವೀಂದ್ರ ಜಡೇಜ ೫೦ ರನ್‌ ಗಳಿಸಿ ವಿಕೆಟ್‌ ಕಾಯ್ದುಕೊಂಡಿದ್ದಾರೆ. ನಾಳೆ ಇದೇ ಜೋಡಿ ಇನ್ನಿಂಗ್ಸ್‌ ಆರಂಭಿಸಲಿದೆ. ಶುಭ್‌ಮನ್‌ ಗಿಲ್‌ ಕೂಡ ಅರ್ಧ ಶತಕ ಪೂರೈಸಿದ್ದಾರೆ.

ನ್ಯೂಜಿಲ್ಯಾಂಡ್‌ ಪರ ಕೈಲ್‌ ಜೇಮಿಸನ್‌ ೩ ವಿಕೆಟ್‌ ಪಡೆದರೆ, ಟಿಮ್‌ ಸೌಥಿ ಒಂದು ವಿಕೆಟ್‌ ಪಡೆದಿದ್ದಾರೆ.

Share Post