Sports

K L ರಾಹುಲ್‌ಗೆ ಮತ್ತೊಂದು ವರ್ಷ ಬ್ಯಾನ್‌ ಭೀತಿ

ಮುಂಬೈ : ಈ ಬಾರಿ ಐಪಿಎಲ್‌ ಇನ್ನಷ್ಟು ರಂಗಿನಿಂದ ಕೂಡಿರಲಿದೆ. ೧೦ ತಂಡಗಳು ಈ ಬಾರಿ ಐಪಿಎಲ್‌ ಕಪ್‌ಗಾಗಿ ಸೆಣಸಾಡಲಿದ್ದಾರೆ. ಈ ಬಾರಿಯ ಐಪಿಎಲ್‌ ಇಂದ ಬ್ಯಾನ್‌ ಆಗುವ ಭೀರಿ ಎದುರಿಸುತ್ತಿದ್ದಾರೆ ಕೆ.ಎಲ್.ರಾಹುಲ್‌ ಮತ್ತು ರಶೀದ್‌ ಖಾನ್.‌ ಲಕ್ನೋ ತಂಡ ನೀಡಿರುವ ದೊಡ್ಡ ಆಫರ್‌ ಇದಕ್ಕೆಲ್ಲಾ ಕಾರಣ ಎನ್ನಲಾಗ್ತಿದೆ.

ಇದೀಗ ಹೊಸ ತಂಡಗಳು ತಮ್ಮ ತಂಡವನ್ನು ಬಲಿಷ್ಠವಾಗಿಸಲು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ. ಅದರಂತೆ ಪಂಜಾಬ್ ತಂಡದ ನಾಯಕರಾಗಿದ್ದ ಕೆ.ಎಲ್ ರಾಹುಲ್‍ಗೆ 20 ಕೋಟಿ ಮತ್ತು ಹೈದರಾಬಾದ್ ತಂಡದ ರಶೀದ್ ಕಾನ್‍ಗೆ 16 ಕೋಟಿ ರೂಪಾಯಿಯ ಆಫರ್ ಒಂದನ್ನು ಲಕ್ನೋ ತಂಡ ನೀಡಿದೆ ಇದನ್ನು ಇವರಿಬ್ಬರು ಒಪ್ಪಿಕೊಂಡಿದ್ದಾರೆ ಎಂಬ ಕುರಿತು ಮೂಲಗಳಿಂದ ವರದಿಯಾಗಿದೆ

ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಸನ್‍ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡ ಬಿಸಿಸಿಐಗೆ ಈ ಬಗ್ಗೆ ದೂರ ನೀಡಿದೆ. ಈ ದೂರಿನಲ್ಲಿ ಲಕ್ನೋ ಫ್ರಾಂಚೈಸ್ ಆಟಗಾರರಿಗೆ ಆಮಿಷ ಒಡ್ಡುತ್ತಿದೆ ಎಂದು ಆರೋಪಿಸಿ, ಕೆಎಲ್ ರಾಹುಲ್ ಮತ್ತು ರಶೀದ್ ಖಾನ್ ಈ ಫ್ರಾಂಚೈಸ್ ಜೊತೆ ಸಂಪರ್ಕಿಸಿರುವುದರ ಬಗ್ಗೆ ಪ್ರಶ್ನೆ ಮಾಡಿದೆ. ಇದು ಈ ಇಬ್ಬರು ಆಟಗಾರಿಗೆ ಮುಳ್ಳಾಗುವ ಸಾಧ್ಯತೆ ಹೆಚ್ಚಿದೆ.

ಬಿಸಿಸಿಐ ನಿಯಮದ ಪ್ರಕಾರ ಒಂದು ಫ್ರಾಂಚೈಸ್‍ನ ಒಪ್ಪಂದ ಅಂತ್ಯವಾಗುವ ಮುನ್ನ ಇನ್ನೊಂದು ಫ್ರಾಂಚೈಸ್ ಆಟಗಾರರನ್ನು ಸಂಪರ್ಕಿಸಬಾರದು ಇದು ತಪ್ಪು. ಇದೀಗ ಈ ತಪ್ಪನ್ನು ರಾಹುಲ್ ಮತ್ತು ರಶೀದ್ ಮಾಡಿದ್ದರೆ ಶಿಕ್ಷೆ ಕೂಡ ಆಗಬೇಕೆಂದು ಪಂಜಾಬ್ ಮತ್ತು ಹೈದರಾಬಾದ್ ಮನವಿ ಸಲ್ಲಿಸಿದೆ. ಇದರಿಂದ ರಾಹುಲ್ ಮತ್ತು ರಶೀದ್ ಖಾನ್ ಐಪಿಎಲ್‍ನಿಂದ ಬ್ಯಾನ್ ಆಗುವ ಭೀತಿ ಎದುರಿಸುತ್ತಿದ್ದಾರೆ.

Share Post