ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ನಾಯಕ
ಮುಂಬೈ : ರೋಹಿತ್ ಶರ್ಮ ಅವರನ್ನು ಏಕದಿನ ಪಂದ್ಯಗಳ ನಾಯಕ ಎಂದು ಬಿಸಿಸಿಐ ಇತ್ತೀಚೆಗಷ್ಟೇ ಘೋಷಣೆ ಮಾಡಿತ್ತು. ಅಭ್ಯಾಸದ ಸಮಯದಲ್ಲಿ ಗಾಯಾಳುವಾದ ಕಾರಣ ಅವರನ್ನು ಟೆಸ್ಟ್ ಪಂದ್ಯಗಳಿಂದ ದೂರ ಇರಿಸಲಾಗಿತ್ತು. ನ್ಯಾಷನಲ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಹಿತ್ ಇನ್ನು ಚೇತರಿಸಿಕೊಳ್ಳುವಂತೆ ಕಾಣ್ತಿಲ್ಲ.
ವರದಿಯಂತೆ ರೋಹಿತ್ ಏಕದಿನ ಸರಣಿಯಿಂದಲೂ ಹೊರಗುಳಿದರೆ ತಂಡದ ನಾಯಕತ್ವದ ಜವಾಬ್ದಾರಿ ಕೆಎಲ್ ರಾಹುಲ್ ವಹಿಸಿಕೊಳ್ಳಲಿದ್ದಾರೆ. ಜನವರಿ ೧೯ರಿಂದ ಶುರುವಾಗುವ ಮೂರು ಪಂದ್ಯಗಳ ಸರಣಿಗೆ ಬಹುತೇಕ ಕೆ.ಎಲ್.ರಾಹುಲ್ ನಾಯಕನಾಗಲಿದ್ದಾರೆ.
೧೫ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲು ಬಿಸಿಸಿಐ ತಲೆಕೆಡಿಸಿಕೊಳ್ಳುವಂತಾಗಿದೆ. ಪ್ರತಿಯೊಂದು ಸ್ಥಾನಕ್ಕೂ ಎರಡಕ್ಕಿಂತ ಹೆಚ್ಚು ಆಯ್ಕೆಗಳು ಇರುವುದೇ ಇದಕ್ಕೆ ಕಾರಣವಾಗಿದೆ.
ಕೆ.ಎಲ್.ರಾಹುಲ್, ಶಿಖರ್ ಧವನ್, ರುತುರಾಜ್, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ, ಶಮಿ ಆಟಗಾರರು ಆಡೋದು ಪಕ್ಕಾ ಆದರೆ ಮಿಕ್ಕ ಸ್ಥಾನಗಳಿಗೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಕೌತುಕದಿಂದ ಕೂಡಿದೆ.