ಇಂದಿನಿಂದ ಚಿತ್ರಮಂದಿರಗಳಲ್ಲಿ ೭ ಗಂಟೆಗೆ ಶೋ ಕ್ಲೋಸ್
ಬೆಂಗಳೂರು: ಕೊರೋನಾದ ಲಾಕ್ ಡೌನ್ ನಿಂದ ಚಿತ್ರರಂಗ ಆರ್ಥಿಕ ನಷ್ಟ ಅನುಭವಿಸುತ್ತಿತ್ತು. ಚಿತ್ರಮಂದಿರದಲ್ಲಿ ಶೇ. ೧೦೦ ರಷ್ಟು ಆಸನಗಳು ಭರ್ತಿ ನೀಡಿತ್ತು. ಇದ್ದರಿಂದಾಗಿ ಚಿತ್ರರಂಗ ಇನ್ನೇನು ಚೇತರಿಸಿಕೊಳ್ಳವಷ್ಟರಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಯಾಕೆಂದರೆ ಇಂದಿನಿಂದ ಸರ್ಕಾರ ರಾತ್ರಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಹೀಗಾಗಿ ಇದರ ಬಿಸಿ ಚಿತ್ರಮಂದಿರಕ್ಕೆ ತಟ್ಟಿದೆ. ಕರ್ಫ್ಯೂ ನಿಂದಾಗಿ ಇಂದಿನಿಂದ ಚಿತ್ರಮಂದಿರಗಳಲ್ಲಿ ನಾಲ್ಕು ಶೋ ಮಾತ್ರ ಪ್ರದರ್ಶನಗೊಳ್ಳಲಿದೆ.
ರಾಜ್ಯದ ಶೇ. ೮೦ ರಷ್ಟು ಚಿತ್ರಮಂದಿರದಲ್ಲಿ ರಾತ್ರಿ ೭ ಗಂಟೆಗೆ ಶೋ ಮುಗಿಯಲಿದೆ. ಈ ಹಿಂದೆ ಚಿತ್ರಮಂದಿರಗಳಲ್ಲಿ ೫ ಶೋ ಪ್ರದರ್ಶನ ನಡೆಯತ್ತಿದ್ದು, ೧೨ ಗಂಟೆಗೆ ಶೋ ಮುಗಿಯುತ್ತಿತ್ತು. ಇದರಿಂದಾಗಿ ಸ್ವಲ್ಪ ಮಟ್ಟಿಗೆ ಚಿತ್ರರಂಗಕ್ಕೆ ಹೊಡೆತ ಬೀಳಲಿದೆ. ತುಂಬಾ ಜನ ನೈಟ್ ಶೋ ಸಿನಿಮಾ ನೋಡವುದಕ್ಕೆ ಇಷ್ಟಪಡುತ್ತಾರೆ. ಮಾರ್ನಿಂಗ್ ಶೋ ಖಾಲಿ ಇದ್ದರೂ ನೈಟ್ ಶೋ ನೋಡುವವರೆ ಹೆಚ್ಚು. ಅದರಲ್ಲಿ ವಿಕೇಂಡ್ ಬಂದರೆ ಸಾಕು ಬಹುತೇಕ ಸಿಲಿಕಾನ್ ಸಿಟಿ ಜನತೆ ನೈಟ್ ಶೋ ನೇ ನೋಡತ್ತಾರೆ. ಹೀಗಾಗಿ ಈ ಕರ್ಫ್ಯೂನಿಂದ ಚಿತ್ರಮಂದಿರದಲ್ಲಿ ಸಮಯ ಬದಲಾವಣೆ ಕಂಡಿದೆ.೧೦ ದಿನಗಳ ವರೆಗೆ ಮಾತ್ರ ಕರ್ಫ್ಯೂ ಇದ್ದು, ನಂತರ ಚಿತ್ರಮಂದಿರಗಳಲ್ಲಿ ಸಮಯ ಬದಲಾಗುತ್ತಾ ಎಂಬುದು ಕಾದುನೋಡಬೇಕಿದೆ.