NationalSports

ಭಾರತವನ್ನು ಸೋಲಿಸಿದರೆ ಜಿಂಬಾಬ್ವೆ ದೇಶದ ಯುವಕನನ್ನು ಮದುವೆಯಾಗ್ತಳಂತೆ ಪಾಕ್‌ ನಟಿ

ನವದೆಹಲಿ; ಟಿ-೨೦ ವಿಶ್ವಕಪ್‌ ಟೂರ್ನಿಯಲ್ಲಿ ಟೀ ಇಂಡಿಯಾವನ್ನು ಸೋಲಿಸಿದರೆ ಜಿಂಬಾಬ್ವೆ ದೇಶದ ಯುವಕನನ್ನು ಮದುವೆಯಾಗುವುದಾಗಿ ಪಾಕ್‌ ಪಾಕ್‌ ನಟಿ ಸೆಹರ್‌ ಶಿನ್ವಾರಿ ಭರ್ಜರಿ ಆಫರ್‌ ನೀಡಿದ್ದಾಳೆ. ಪಾಕಿಸ್ತಾ ತಂಡ ಸೆಮಿಫೈನಲ್‌ ಪ್ರವೇಶಿಸುವುದು ಕಷ್ಟವಾಗಿದೆ. ಒಂದು ವೇಳೆ ಜಿಂಬಾಬ್ವೆ ತಂಡ ಭಾರತವನ್ನು ಸೋಲಿಸಿದರೆ ಪಾಕ್‌ ಸೆಮಿಫೈನಲ್‌ ಪ್ರವೇಶಿಸುವ ಕನಸು ಹಾಗೆಯೇ ಉಳಿಸಿಕೊಳ್ಳಬಹುದು. ಹೀಗಾಗಿ ನಟಿ ಈ ಆಫರ್‌ ನೀಡಿದ್ದಾಳೆ.

ಈ ನಿಟ್ಟಿನಲ್ಲಿ ಟ್ವೀಟ್ ಮಾಡಿರುವ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ, ಭಾರತ ವಿರುದ್ಧ ಜಿಂಬಾಬ್ವೆ ಗೆದ್ದರೆ ಆ ದೇಶದ ಯುವಕನನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. ಭಾರತ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯ ನವೆಂಬರ್‌ ೬ರಂದು ಮೆಲ್ಬರ್ನ್‌ನಲ್ಲಿ ನಡೆಯಲಿದೆ.

Share Post