Sports

ಗ್ಲೆನ್‌ ಮ್ಯಾಕ್ಸಿ ಈಗ ತಮಿಳುನಾಡಿನ ಅಳಿಯ – ವೈರಲ್‌ ಆಯ್ತು ಲಗ್ನ ಪತ್ರಿಕೆ

ಚೆನೈ : ಹೊರದೇಶದ ಕ್ರಿಕೆಟ್‌ ಆಟಗಾರರಿಗೂ ಭಾರತಕ್ಕೂ ಒಂದು ಉತ್ತಮ ನಂಟಿದೆ. ಅನೇಕ ನಿದರ್ಶನಗಳನ್ನು ನಾವು ಬಲ್ಲೆವು. ಈಗ ಅದೇ ಸಾಲಿಗೆ ಆಸ್ಟ್ರೆಲಿಯಾ ಕ್ರಿಕೆಟರ್‌ ಕೂಡ ಸೇರಿದ್ದಾರೆ.

ಕಳೆದ ವರ್ಷದಿಂದ ಆರ್‌ಸಿಬಿ ಪರ ಬ್ಯಾಟ್‌ ಬೀಸುತ್ತಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಈಗ ತಮಿಳುನಾಡಿನ ಅಳಿಯನಾಗಲಿದ್ದಾರೆ. ತಮಿಳುನಾಡಿನ ಮೂಲದ ಗೆಳತಿ ವಿನಿ ರಾಮನ್‌ ಅವರೊಟ್ಟಿಗೆ ಇದೇ ಮಾರ್ಚ್‌ ೨೭ರಂದು ತಮಿಳು ಸಂಪ್ರದಾಯದ ಪ್ರಕಾರ ಮದುವೆ ಆಗಲಿದ್ದಾರೆ.

ವಿನಿರಾಮನ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಾಕಷ್ಟು ಕಾಲದಿಂದ ಪರಸ್ಪರ ಇಷ್ಟಪಡುತ್ತಿದ್ದರು. ಈಗ ಇವರ ಪ್ರೀತಿಗೆ ಮದುವೆಯ ಮುದ್ರೆ ಬೀಳಲಿದೆ.

ತಮಿಳು ಸಂಪ್ರದಾಯದಂತೆ ಮ್ಯಾಕ್ಸಿ ಅವರ ಲಗ್ನ ಪತ್ರಿಕೆ ರೂಪುಗೊಂಡಿದೆ. ಈಗ ಈ ಲಗ್ನಪತ್ರಿಕೆ ವೈರಲ್‌ ಆಗಿದೆ.

Share Post