Cinema

ಅಮೆಜಾನ್‌ ಪ್ರೈಮ್‌ನಲ್ಲಿ ಪುನೀತ್‌ ಅವರ ಸಿನಿಮಾಗಳನ್ನು ಉಚಿತವಾಗಿ ನೋಡಿ

ಬೆಂಗಳೂರು : ಪುನೀತ್‌ ರಾಜ್‌ ಕುಮಾರ್‌ ಅವರು ನಮ್ಮನ್ನು ಅಗಲಿ ಮೂರು ತಿಂಗಳುಗಳು ಕಳೆಯುತ್ತಾ ಬಂದಿದೆ ಆದರೆ ಅವರ ಮೇಲಿನ ಅಭಿಮಾನ ಮಾತ್ರ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಪುನೀತ್‌ ಅವರು ಇತ್ತೀಚೆಗೆ ಶುರು ಮಾಡಿದ್ದ PRK Productions ಬ್ಯಾನರ್‌ ಇಂದ ಸಾಕಷ್ಟು ಸಿನಿಮಾಗಳನ್ನು ತಯಾರಿಸಿ ಜನರಿಗೆ ಅರ್ಪಿಸುವ ಉತ್ಸಾಹದಲ್ಲಿದ್ದರು ಅಪ್ಪು. ಆದರೆ ಅದು ನೆರವೇರಲಿಲ್ಲ.

ಈಗ ಪುನೀತ್‌ ಅವರ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡ  ಸಿನಿಮಾಗಳನ್ನು ನೀವು ಈಗ ಅಮೆಜಾನ್‌ ಪ್ರೈಮ್‌ ನಲ್ಲಿ ಉಚಿತವಾಗಿ ನೋಡಬಹುದಾಗಿದೆ. ಓಟಿಟಿ ಪ್ಲಾಟ್‌ಫಾರ್ಮ್‌ ಆಗಿರುವ ಅಮೆಜಾನ್‌ ಪ್ರೈಮ್ ಈ ಒಂದು ಬಿಗ್‌ ಆಫರ್‌ ಒಂದನ್ನು ಬಿಡುಗಡೆ ಮಾಡಿದೆ.

ಪುನೀತ್‌ ಅವರ ಸಿನಿಮಾಗಳಾದ ಫ್ಯಾಮಿಲಿ ಪ್ಯಾಕ್‌, ಒನ್‌ ಕಟ್‌ ಟು ಕಟ್‌, ಮ್ಯಾನ್‌ ಆಫ್‌ ದಿ ಮ್ಯಾಚ್‌ ಸಿನಿಮಾಗಳನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಿರುವ ಅಮೆಜಾನ್‌ ಪ್ರೈಮ್‌ ಈ ಎಲ್ಲಾ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಟ್ಟಿದೆ.

ಫೆಬ್ರುವರಿ ಇಡೀ ತಿಂಗಳು ಈ ಆಫರ್‌ ಇರಲಿದ್ದು ಯುವರತ್ನ, ಲಾ, ಮಾಯಾ ಬಜಾರ್‌, ಫ್ರೆಂಚ್‌ ಬಿರಿಯಾನಿ, ಕವಲುದಾರಿ ಸಿನಿಮಾಗಳನ್ನು ಕೂಡ ನಾವು ಉಚಿತವಾಗಿ ನೋಡಬಹುದಾಗಿದೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಮೆಜಾನ್‌ ಪ್ರೈಮ್‌ ಈ ಮಾಹಿತಿ ನೀಡಿದೆ.

 

 

Share Post