Sports

ವಿಶ್ವಕಪ್‌ ಟ್ರೋಫಿಯನ್ನು ಕಾಲಡಿ ಇಟ್ಟು ಫೋಟೋ; ಇದು ನಿಜಾನಾ..?

ನವದೆಹಲಿ; ನಿನ್ನೆಯಷ್ಟೇ ನಡೆದ ಕ್ರಿಕೆಟ್‌ ವಿಶ್ವಕಪ್‌ ೨೦೨೩ ಟೂರ್ನಿಯ ಫೈನಲ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಗೆದ್ದು ಆಸ್ಟ್ರೇಲಿಯಾ ಪ್ರಶಸ್ತಿಯನ್ನು ಮುಡಿಗೇಡಿರಿಸಿಕೊಂಡಿದೆ. ಆದ್ರೆ ವಿಶ್ವಕಪ್‌ ನ್ನು ಆಸ್ಟ್ರೇಲಿಯಾ ಆಟಗಾರರು ಕಾಲಿನಡಿ ಇಟ್ಟು ಅದಕ್ಕೆ ಅವಮಾನ ಮಾಡಿದ್ದಾರೆ. ಇದು ಹಲವರ ಅಪಸ್ವರಕ್ಕೆ ಕಾರಣವಾಗಿದೆ.

ಇನ್ಸ್ಟಾಗ್ರಾಂ ನಲ್ಲಿ ಒಂದಷ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿನ ಒಂದು ಫೋಟೋ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಟ್ರೋಫಿಯ ಮೇಲೆ ಕಾಲುಗಳಿನ್ನಿಟ್ಟು ಕೂತಿರುವ ಫೋಟೋ ಇದಾಗಿದೆ.

ನಮ್ಮ ಭಾರತ ಟ್ರೋಫಿ ಗೆದ್ದಿದ್ದರೆ ಅದನ್ನು ನಾವು ಪೂಜೆ ಮಾಡುತ್ತಿದ್ದೆವು. ದೇವರ ಸ್ಥಾನದಲ್ಲಿ ಇಡುತ್ತಿದ್ದೆವು. ಆಸ್ಟ್ರೇಲಿಯನ್ನರು ವಿಶ್ವಕಪ್‌ ಟ್ರೋಫಿಯನ್ನು ಕಾಲಡಿ ಇಟ್ಟಿದ್ದಾರೆ. ಅವರಿಗೂ ನಮಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಹಲವು ಸೋಷಿಯಲ್‌ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದ್ರೆ ಇದು ನಿಜವಾದ ಫೋಟೋ ಅಲ್ಲ, ಎಡಿಟೆಡ್‌ ಎಂದು ಹೇಳಲಾಗುತ್ತಿದೆ.

Share Post