Sports

IPL 2022 : ಮೆಗಾ ಆಕ್ಷನ್‌ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಸಚಿವರ ಹೆಸರು

IPL 2022 : ಈ ಹಿಂದೆ ಕೆಕೆಆರ್‌, ರೈಸಿಂಗ್‌ ಪುಣೆ, ಪಂಜಾಬ್‌ ತಂಡಗಳ ಪರ ಆಡಿದ್ದ ಮನೋಜ್‌ ತಿವಾರಿ ಅವರು ಈಗ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿದ್ದಾರೆ. 2018ರಲ್ಲಿ ಕೊನೆಯ ಬಾರಿಗೆ ಪಂಜಾಬ್‌ ತಂಡ ಪ್ರತಿನಿಧಿಸಿದ್ದ ಮನೋಜ್‌ ತಿವಾರಿ ಆನಂತರ ಸೇಲ್‌ ಆಗದೆ ಉಳಿದಿದ್ದರು. ಈಗ ಅವರು ಮತ್ತೆ ತಮ್ಮ ಹೆಸರನ್ನು ಐಪಿಎಲ್‌ ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಭಾರತ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದ ಮನೋಜ್‌ ಅವರು ಇಂದು ಪಶ್ಚಿಮ ಬಂಗಾಳದ ಸಚಿವರಾಗಿದ್ದಾರೆ. ಮನೋಜ್ ತಿವಾರಿ ಸಚಿವರಾಗಿ ತಮ್ಮ ಹೆಸರನ್ನು ಮೆಗಾ ಹರಾಜಿಗೆ ನೀಡಿರುವುದು ವಿಶೇಷವಾಗಿದೆ. ಅವರ ಮೂಲ ಬೆಲೆಯನ್ನು 50 ಲಕ್ಷಕ್ಕೆ ನಿಗದಿ ಪಡಿಸಿಕೊಂಡಿದ್ದಾರೆ.

ಕಳೆದ 2020ರ ಆಕ್ಷನ್‌ನಲ್ಲಿಯೂ ಮನೋಜ್‌ ತಿವಾರಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು ಆದರೆ ಅನ್‌ಸೋಲ್ಡ್‌ ಆಗಿ ಉಳಿದುಕೊಂಡಿದ್ದರು.

Share Post