ಡೇಟ್ ಮಾಡುವೆ ಎಂದಿದ್ದ ಪಾಕ್ ನಟಿ; ಬಾಂಗ್ಲಾ ಸೋತ ಮೇಲೆ ಏನೇಳಿದ್ಳು..?
ನವದೆಹಲಿ; ಭಾರತದ ವಿರುದ್ಧ ಬಾಂಗ್ಲಾ ದೇಶ ಗೆದ್ದರೆ ಬಾಂಗ್ಲಾ ಆಟಗಾರರ ಜೊತೆ ನೈಟ್ ಡಿನ್ನರ್ ಡೇಟ್ ಮಾಡುತ್ತೇನೆ ಎಂದು ಪಾಕ್ ನ ಖ್ಯಾತ ನಟಿ ಸೆಹರ್ ಶಿನ್ವಾರಿ ಹೇಳಿದ್ದರು. ಆದ್ರೆ ಈಗ ಬಾಂಗ್ಲಾದೇಶ ಸೋತಿದೆ. ಈ ಹಿನ್ನೆಲೆಯಲ್ಲಿ ಆಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಬಗ್ಗೆ ನಟಿ ಟ್ವೀಟ್ ಮಾಡಿದ್ದಾರೆ. ಬಾಂಗ್ಲಾ ಆಟಗಾರರು ಒಳ್ಳೆಯ ಫೈಟ್ ನೀಡಿದ್ದಾರೆ. ಭಾರತದ ವಿರುದ್ಧ ಅವರದೇ ನೆಲದಲ್ಲಿ ಒಳ್ಳೆಯ ಸವಾಲು ನೀಡಿದ್ದೀರಿ ಎಂದು ಬಾಂಗ್ಲಾ ಆಟಗಾರರನ್ನು ಹೊಗಳಿದ್ದಾ:ಎ. ನಟಿ ಈ ಟ್ವೀಟ್ ವೈರಲ್ ಆಗಿದ್ದು, ಟ್ರೋಲ್ ಕೂಡಾ ಆಗುತ್ತಿದೆ.