Sports

BBL 2021-22 : ಆಟಗಾರನಿಗೆ ಕೊರೊನಾ, ಕಣಕ್ಕಿಳಿದ ಕೋಚ್

ಬಿಗ್‌ ಬ್ಯಾಶ್‌ ಲೀಗ್‌ನಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ಜೋಶ್‌ ಫಿಲಿಪಿ ಅವರಿಗೆ ಕೊರೊನಾ ಇರುವ ಕಾರಣ ಅವರನ್ನು ಕೊನೆ ಕ್ಷಣದಲ್ಲಿ ಆಡುವ 11ರ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಿಂದ ಸಿಡ್ನಿ ಸಿಕ್ಸರ್ಸ್‌ಗೆ ಭಾರಿ ಹಿನ್ನಡೆ ಉಂಟಾಗಿದೆ ಆದರೆ ಈ ಘಟನೆ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.

ಐಪಿಎಲ್‌ ಬಿಟ್ಟರೆ ನಂತರದ ಸ್ಥಾನದಲ್ಲಿರುವ ಬಿಗ್‌ ಬ್ಯಾಶ್‌ ಲೀಗ್‌ ಸಾಕಷ್ಟು ಜನಪ್ರಿಯತೆ ಪಡೆದಿದೆ. ಸಿಡ್ನಿ ಸಿಕ್ಸರ್‌ ತಂಡದ ಪರ ಆಡುತ್ತಿದ್ದ ಜೋಶ್‌ ಫಿಲಿಪ್‌ ಅವರಿಗೆ ಕೊರೊನಾ ಬಂದ ಹಿನ್ನೆಲೆ ಅವರನ್ನು ತಂಡದಿಂದ ಕೈಬಿಟ್ಟರು. ತಕ್ಷಣವೇ ತಂಡದ ಸಹಾಯಕ ಕೋಚ್‌ ಆಗಿದ್ದ ಜೇ ಲ್ಯಾಂಟನ್‌ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿದೆ.

ಜೋಶ್‌ ಫಿಲಿಪ್‌ ಆರಂಭಿಕ ಆಟಗಾರ ಮತ್ತು ವಿಕೆಟ್‌ ಕೀಪರ್‌ ಆಗಿದ್ದರು. ಇನ್ನು ಜೇ ಲ್ಯಾಂಟನ್‌ ಅವರಿಗೆ ಕೇವಲ 31ವರ್ಷವಾಗಿದೆ. ಕಳೆದ ಸೀಸನ್‌ ಅಲ್ಲಿ ಸಿಡ್ನಿ ಥಂಡರ್‌ ತಂಡದ ಪರ ಆಡಿದ್ದ ಲ್ಯಾಂಟನ್‌ ಉತ್ತಮ ಯಶಸ್ಸು ಗಳಿಸದ ಕಾರಣ ಅವರನ್ನು ಯಾರು ಖರೀದಿ ಮಾಡಿರಲಿಲ್ಲ. ಇದರಿಂದ ಅವರು ಕೋಚ್‌ ಸ್ಥಾನ ಅಲಂಕರಿಸಿದ್ದರು. ಈ ಪಂದ್ಯವನ್ನು ಸಿಡ್ನಿ ಸಿಕ್ಸರ್ಸ್‌ ತಂಡದ ಗೆದ್ದುಕೊಂಡಿದ್ದು ವಿಶೇಷವಾಗಿದೆ.

Share Post