Sports

Ind vs SriLanka : ಬದಲಾದ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ಮುಂಬೈ : ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಶ್ರೀಲಂಕಾ ಭಾರತ ಪ್ರವಾಸ ಮಾಡಲಿದೆ. ಟೀಂ ಇಂಡಿಯಾ ವಿರುದ್ಧ ಮೂರು T20 ಹಾಗೂ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಮುಂಚಿನ ವೇಳಾಪಟ್ಟಿಯ ಪ್ರಕಾರ ಮೊದಲು ಟೆಸ್ಟ್‌ ಆಡಿ ನಂತರ ಟಿ-ಟ್ವೆಂಟಿ ಆಡುವ ಯೋಜನೆ ಹೊಂದಿತ್ತು ಆದರೆ ಈಗ ಇದನ್ನು ತಿರುಚಲಾಗಿದೆ.

ಫೆ. 24 ರಂದು ಮೊದಲ ಟಿ-20 ಪಂದ್ಯ ನಡೆಯಲಿದೆ. ಇನ್ನು ಟೆಸ್ಟ್‌ ತಂಡಕ್ಕೆ ನಾಯಕ ಯಾರೆಂದು ಬಿಸಿಸಿಐ ತೀರ್ಮಾನಿಸಿಲ್ಲ. ಟಿ20 ಬಳಿಕ ಟೆಸ್ಟ್‌ ನಾಯಕ ಯಾರೆಂಬುದನ್ನು ಘೋಷಿಸಬಹುದು ಎನ್ನಲಾಗ್ತಿದೆ. ರೋಹಿತ್‌ ಅವರನ್ನೇ ಪೂರ್ಣ ಪ್ರಮಾಣದ ನಾಯಕರನ್ನಾಗಿಸಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಶ್ರೀಲಂಕಾ ಭಾರತ ಪಂದ್ಯಗಳ ವೇಳಾಪಟ್ಟಿ

1ನೇ ಟಿ20: ಫೆಬ್ರವರಿ 24 (ಲಕ್ನೌ)

ಎರಡನೇ ಟಿ20: ಫೆಬ್ರವರಿ 26 (ಧರ್ಮಶಾಲಾ)

ಮೂರನೇ ಟಿ20: ಫೆಬ್ರವರಿ 27 (ಧರ್ಮಶಾಲಾ)

1ನೇ ಟೆಸ್ಟ್: 4 ರಿಂದ 8 ಮಾರ್ಚ್ (ಮೊಹಾಲಿ)

2ನೇ ಟೆಸ್ಟ್ (ಹಗಲು-ರಾತ್ರಿ): ಮಾರ್ಚ್ 12-16 (ಬೆಂಗಳೂರು)

Share Post