Districts

ವಿಜಯಪುರದ ಸರ್ಕಾರಿ ಕಾಲೇಜಿನಲ್ಲಿ ತಾರಕಕ್ಕೇರಿದ ಹಿಜಾಬ್‌ ವಿವಾದ

ವಿಜಯಪುರ : ಒಂದು ವಾರದ ರಜೆಯ ಬಳಿಕ ಕಾಲೇಜುಗಳು ಇಂದಿನಿಂದ ಎಲ್ಲೆಡೆ ಮತ್ತೆ ಪುನರಾರಂಭಗೊಂಡಿದೆ.  ವಿಜಯಪುರದ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್‌ ಕೇಸರಿ ವಿವಾದ ತಾರಕಕ್ಕೇರಿದೆ. ಸರ್ಕಾರದ ಆದೇಶದಂತೆ ಇಂದಿನಿಂದ ಕಾಲೇಜನ್ನು ತೆರೆಯಲಾಗಿದೆ. ಹಿಜಾಬ್‌ ಧರಿಸಿ ಬಂದ ಹೆಣ್ಣು ಮಕ್ಕಳನ್ನು ಪ್ರಾಂಶುಪಾಲರು ತಡೆದು ಹಿಜಾಬ್‌ ತೆಗೆದು ಒಳಬರುವಂತೆ ಮನವಿ ಮಾಡಿಕೊಂಡರೂ ವಿದ್ಯಾರ್ಥಿನಿಯರು ಮಾತ್ರ ಕೇಳುತ್ತಿಲ್ಲ.

ಹೈ ಕೋರ್ಟ್‌ನಿಂದ ಸಮವಸ್ತ್ರ ನೀತಿ ಸಂಹಿತೆ ಜಾರಿಯಾಗಿದ್ದರೂ ಕೂಡ ವಿದ್ಯಾರ್ಥಿನಿಯರು ಅದನ್ನು ಪಾಲಿಸಲು ತಯಾರಿಲ್ಲ. ಪ್ರಾಂಶುಪಾಲರನ್ನೇ ವಿದ್ಯಾರ್ಥಿನಿಯರು ಪ್ರಶ್ನಿಸುತ್ತಿದ್ದಾರೆ. ಕಾಲೇಜಿನ ಒಳಗೆ ಬರುವಾಗ ನೀವು ಹಿಜಾಬ್‌ ತೆಗೆದು ಬನ್ನಿ ಎಂದು ಪ್ರಾಂಶುಪಾಲರು ಮನವಿ ಮಾಡಿಕೊಂಡರೂ ವಿದ್ಯಾರ್ಥಿನಿಯರು ಮಾತ್ರ ಪಟ್ಟು ಬಿಡುತ್ತಿಲ್ಲ. ನಾವು ಹಿಜಾಬ್‌ ಧರಿಸಿಯೇ ಬರುತ್ತೀವಿ, ಇಷ್ಟು ದಿನ ಇಲ್ಲದ ನಿಯಮವನ್ನು ಈಗ ಏಕೆ ನಮ್ಮ ಮೇಲೆ ಹೇರುತ್ತೀರಿ ? ನಮ್ಮ ಇಸ್ಲಾಮ್‌ ಧರ್ಮದಲ್ಲಿ ಹಿಜಾಬ್‌ ಧರಿಸಲೇಬೇಕು, ನಮಗೆ ಧರ್ಮವೇ ಮುಖ್ಯ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.

 

Share Post