Sports

Ind vs South Africa ODI : ಕೆ. ಎಲ್‌ ರಾಹುಲ್‌ ನಾಯಕ, ಬುಮ್ರಾ ಉಪನಾಯಕ

ಜೋಹಾನ್ಸ್‌ಬರ್ಗ್‌ : ದ.ಆಫ್ರಿಕಾ ಪ್ರವಾಸ ಕೈಗೊಂಡಾಗಿನಿಂದ ಭಾರತ ತಂಡಕ್ಕೆ ಅಚ್ಚರಿ ಮೇಲೆ ಅಚ್ಚರಿ ಸಂಗತಿಗಳು ಎದುರಾಗ್ತಿವೆ. ಭಾರತದ ಎರಡನೇ ಟೆಸ್ಟ್‌ ಪಂದ್ಯಕ್ಕೆ ಕೆ ಎಲ್‌ ರಾಹುಲ್‌ ನಾಯಕರನ್ನಾಗಿಸುವ ಮೂಲಕ ಒಂದು ಅಚ್ಚರಿ ನೀಡಿದ್ದ ಟೀಂ ಇಂಡಿಯಾ ಈಗ ಏಕದಿನ ಸರಣಿಗೆ ಜಸ್ಪ್ರಿತ್‌ ಬುಮ್ರಾ ಅವರನ್ನು ಉಪನಾಯಕರನ್ನಾಗಿ ಘೋಷಿಸಿ ಮತ್ತೊಂದು ಅಚ್ಚರಿ  ಮೂಡಿಸಿದೆ.

ಇನ್ನು ಇದೇ ಸಮಯದಲ್ಲಿ  ಟೀಂ ಇಂಡಿಯಾ ತಂಡಕ್ಕೆ ಮೊಹಮ್ಮದ್‌ ಸಿರಾಜ್‌ ಕಮ್‌ಬ್ಯಾಕ್‌ ಮಾಡಲಿದ್ದಾರೆ. ಸ್ನಾಯು ಸೆಳೆತದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಸಿರಾಜ್‌ ತಂಡಕ್ಕೆ ಮರಳಿರುವುದು ಟೀಂ ಇಂಡಿಯಾದ ಬಲವನ್ನು ದುಪ್ಪಟ್ಟು ಮಾಡಿದೆ.

ಎಲ್ಲಾ ಮಾದರಿಗೂ ರೋಹಿತ್‌ ಆಗಲಿದ್ದಾರೆ ರೋಹಿತ್‌ ಶರ್ಮಾ. ವಿರಾಟ್‌ ಕೊಹ್ಲಿ ಮೊನ್ನೆ ಇದ್ದಕ್ಕಿದ್ದ ಹಾಗೆ ಟೆಸ್ಟ್‌ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈಗ ಅವರ ಸ್ಥಾನವನ್ನು ರೋಹಿತ್‌ ಶರ್ಮಾ ತುಂಬಲಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಅಂತಿಮ ನಿರ್ಧಾರವನ್ನು ಬಿಸಿಸಿಐ ಸದ್ಯದಲ್ಲಿಯೇ ತಿಳಿಸಲಿದೆ.

ಬೂಮ್ರಾ ಸೋಮವಾರ ಸುದ್ದಿಘೋಷ್ಠಿಯಲ್ಲಿ ಮಾತನಾಡಿ ಸಿರಾಜ್‌ ತಂಡಕ್ಕೆ ಮರಳಲಿದ್ದಾರೆ, ಮತ್ತು ನಮ್ಮ ತಂಡ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ ಎಂದು ತಿಳಿಸಿದ್ದಾರೆ.

ಏಕದಿನ ಪಂದ್ಯಗಳಿಗೆ ಭಾರತ ತಂಡ

ಕೆ.ಎಲ್.ರಾಹುಲ್ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪ-ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್, ಭುವನೇಶ್ವರ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್ ಹಾಗೂ ನವದೀಪ್ ಸೈನಿ.

Share Post