BengaluruCrime

ಶಂಕಿತ ಉಗ್ರ ಸಮುದ್ರ ಮಾರ್ಗದ ಮೂಲಕ ಪರಾರಿಗೆ ಸ್ಕೆಚ್‌; ಹೈ ಅಲರ್ಟ್‌

ಮಂಗಳೂರು; ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ 9 ದಿನ ಕಳೆದಿದೆ. ಬಹುತೇಕ ಈ ಸ್ಫೋಟವನ್ನು ಯಾರು ಮಾಡಿದ್ದಾರೆ ಅನ್ನೋದು ಕೂಡಾ ಬಯಲಾಗಿದೆ. ಬೆಂಗಳೂರಿನಿಂದ ಬಳ್ಳಾರಿಯವರೆಗೂ ಇದರ ನಂಟು ಬೆಳೆದಿದೆ. ಆದ್ರೆ ಇನ್ನೂ ಕೂಡಾ ಶಂಕಿತ ಉಗ್ರ ಪತ್ತೆಯಾಗಿಲ್ಲ. ಆತ ಎಲ್ಲಿ ಅಡಗಿದ್ದಾನೆ ಎಂಬುದನ್ನು ಪತ್ತೆ ಹಚ್ಚುವುದೇ ಎನ್‌ಐಎ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ. ಹೀಗಿರುವಾಗಲೇ ಶಂಕಿತರು, ಸಮುದ್ರ ಮಾರ್ಗದ ಮೂಲಕ ಬೇರೆ ದೇಶಗಳಿಗೆ ಪರಾರಿಯಾಗುವ ಸಾಧ್ಯತೆ ಇದೆ.

ಆಯಕಟ್ಟಿ ಸ್ಥಳಗಳಲ್ಲಿ ಹೈ ಅಲರ್ಟ್‌;

ಆಯಕಟ್ಟಿ ಸ್ಥಳಗಳಲ್ಲಿ ಹೈ ಅಲರ್ಟ್‌; ಬಾಂಬ್‌ ಇಟ್ಟಿದ್ದ ಶಂಕಿತ ಉಗ್ರ ಸೇರಿ ಆತನ ಸಹಚರರು ಸಮುದ್ರ ಮಾರ್ಗದ ಮೂಲಕ ಪರಾರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದ ಆಯಕಟ್ಟಿ ಜಾಗದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.  ಮಂಗಳೂರು ಕರಾವಳಿ ಕಾವಲು ಪಡೆಗೆ ಎನ್‌ಐಎ ತಂಡ ಕೆಲ ಸೂಚನೆಗಳನ್ನು ನೀಡಿದೆ. ಬೋಟ್‌ ಹಾಗೂ ಎಲ್ಲಾ ದೋಣಿಗಳನ್ನೂ ಪೊಲೀಸರ ಮೂಲಕ ತಪಾಸಣೆಗೊಳಪಡಿಸಬೇಕೆಂದು ಸೂಚನೆ ನೀಡಲಾಗಿದೆ.

ಬಳ್ಳಾರಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಶಂಕಿತ;

ಬಳ್ಳಾರಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಶಂಕಿತ; ಮಾರ್ಚ್‌ 1ರಂದು ಶಂಕಿತ ಉಗ್ರ ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟು ಹೋಗಿದ್ದ. ಅದು ಅಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಫೋಟಗೊಂಡಿತ್ತು. ಅನಂತರ ಆತ ಬಿಎಂಟಿಸಿ ಬಸ್‌ ಹತ್ತಿ ಮೆಜೆಸ್ಟಿಕ್‌ ಬಂದಿದ್ದ. ಅಲ್ಲಿಂದ ಇನ್ನೊಂದು ಬಸ್‌ ಹತ್ತಿ ಲುಲು ಮಾಲ್‌ ಬಳಿ ಇಳಿದುಕೊಂಡಿದ್ದ. ಅಲ್ಲಂದ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ ಬಳ್ಳಾರಿ ಮೂಲಕ ಪುಣೆಗೆ ಹೋಗುವ ಬಸ್‌ ಹತ್ತಿದ್ದ. ಆದ್ರೆ ಅಂದು ರಾತ್ರಿ 9 ಗಂಟೆ ಸುಮಾರಿಗೆ ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಓಡಾಡಿದ್ದಾನೆ. ಹೀಗಾಗಿ ಶಂಕಿತ ಉಗ್ರ ಬಳ್ಳಾರಿಯಲ್ಲೇ ಇಳಿದುಕೊಂಡಿದ್ದಾನೆ ಎನ್ನಲಾಗಿದೆ. ಆತ ಅಲ್ಲಿಂದ ಆಟೋ ಹತ್ತಿ ಕೌಲ್‌ ಬಜಾರ್‌ಗೆ ಹೋಗಿರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ನೆಐಎ ಅಧಿಕಾರಿಗಳು ಆಟೋ ಚಾಲಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಜೈಲಿನಲ್ಲಿದ್ದ ವಿಚಾರಣೆ, ಅಮೀನಿಯಂ ನೈಟ್ರೇಟ್‌;

ಜೈಲಿನಲ್ಲಿದ್ದ ವಿಚಾರಣೆ, ಅಮೀನಿಯಂ ನೈಟ್ರೇಟ್‌; ಕಳೆದ ಡಿಸೆಂಬರ್‌ ನಲ್ಲಿ ಮೀನಾಜ್‌ ಅಲಿಯಾಸ್‌ ಸುಲೇಮಾನ್‌ ಎಂಬಾತನನ್ನು ಪೊಲೀಸರು ಬಳ್ಳಾರಿಯಲ್ಲಿ ಬಂಧಿಸಿದ್ದಾರೆ. ಇದಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಇವರ ಸಹಚರರೇ ಸ್ಫೋಟ ನಡೆಸಿರಬಹುದು ಎಂದು ಹೇಳಲಾಗಿದೆ. ಅಂದಹಾಗೆ, ಕಳೆದ ಅಕ್ಟೋಬರ್‌ ನಲ್ಲಿ ಈ ಗ್ಯಾಂಗ್‌, ರಸಗೊಬ್ಬರ ಅಂಗಡಿಯೊಂದರಲ್ಲಿ ಒಂದು ಕೆಜಿ ಅಮೋನಿಯಂ ನೈಟ್ರೇಟ್‌ ಖರೀದಿ ಮಾಡಿತ್ತು. ಇದನ್ನೇ ಬಳಸಿ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆಸಿರಬಹುದು ಎಂದು ಹೇಳಲಾಗಿದೆ. ಕೌಲ್‌ಬಜಾರ್‌ನ ಶಾಪ್‌ನ ಮಾಲೀಕರನ್ನು ಕೂಡಾ ಈ ಬಗ್ಗೆ ವಿಚಾರಣೆಗೊಳಪಡಿಸಲಾಗಿದೆ.

 

Share Post