Districts

ವೀಕೆಂಡ್‌ ಕರ್ಫ್ಯೂಗೆ ಕೆ.ಎಸ್‌ ಈಶ್ವರಪ್ಪ ಬೇಸರ

ಶಿವಮೊಗ್ಗ: ಬೆಂಗಳೂರಿನಲ್ಲಿ ಕೊರೋನಾ ಮತ್ತು ಒಮಿಕ್ರಾನ್‌ ಪ್ರಕರಣ ಜಾಸ್ತಿಯಾಗುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಕಠಿಣ ಕ್ರಮ ಜಾರಿಗೊಳಿಸಿದೆ. ರಾಜ್ಯಾದ್ಯಂತ ೨ ವಾರಗಳ ಕಾಲ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಿದೆ. ಇದಕ್ಕೆ ಕೆ.ಎಸ್‌ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ  ಅವರು, ಬೆಂಗಳೂರಿನಲ್ಲಿ ಕೊರೋನಾ ಜಾಸ್ತಿಯಾಗಿದೆ. ಹಾಗಾಗಿ ಅಲ್ಲಿ ಕೊರೋನಾ ನಿಯಮ ಜಾರಿಗೊಳಿಸಬೇಕು. ಬೆಂಗಳೂರು ಹಾಗೂ ಗಡಿ ಜಿಲ್ಲೆಗಳಲ್ಲಿ ಖಂಡಿತವಾಗಿಯೂ ಬಿಗಿ ಮಾಡಬೇಕು.ಯಾಕಂದರೆ ಜನರ ನಿರ್ಲಕ್ಷ್ಯಯಿಂದ ಕೊರೋನಾ ಸೋಂಕು ಕೈ ಮೀರಿ ಹೋಗಿದೆ. ಇದನ್ನು ತಡೆಗಟ್ಟವುದಕ್ಕೆ ಕೆಲ ನಿರ್ಬಂಧಗಳನ್ನು ಸರ್ಕಾರ ಹೇರಿದೆ. ಆದರೆ ರಾಜ್ಯಾದ್ಯಂತ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಿರುವುದು ತಪ್ಪು ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದ ಎಲ್ಲ ಕಡೆ ಕರ್ಫ್ಯೂ ಜಾರಿಗೆ ತರುವುದು ಸರಿಯಲ್ಲ. ಇದ್ದರಿಂದ ಜನರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ಸಿಎಂ ಹಾಗೂ ಉಳಿದ ಅಧಿಕಾರಿಗಳ ಜೊತೆ ನಾನು ಮಾತನಾಡುತ್ತೇನೆ. ಹಾಗೇ ನಾಳೆ ಸಚಿವ ಸಂಪುಟ ಸಭೆಯಲ್ಲೂ ಕೂಡ ಚರ್ಚೆ ಮಾಡುತ್ತೇನೆ ಎಂದರು.

Share Post