ಸೌರವ ಗಂಗೂಲಿ ಪುತ್ರಿಗೆ ಕೊರೋನಾ ಪಾಸಿಟಿವ್
ದೆಹಲಿ: ದೇಶದಲ್ಲಿ ಕೊರೋನಾ ಮತ್ತು ರೂಪಾಂತರಿ ತಳಿ ಒಮಿಕ್ರಾನ್ ಅಬ್ಬರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇತ್ತೀಚೆಗೆ ಅಷ್ಟೇ ಕ್ರಿಕೆಟಿಗ ಸೌರವ್ ಗಂಗೂಲಿಯವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಅವರು ಕೆಲ ದಿನಗಳು ಆಸ್ಪತ್ರೆಗೆ ದಾಖಲಾಗಿ, ಚೇತರಿಸಿಕೊಂಡಿದ್ದರು. ಆದರೆ ಇದೀಗ ಅವರ ಪುತ್ರಿ ಸೇರಿದಂತೆ ಕುಟುಂಬ ಸದ್ಯರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅವರಿಗೆ ಯಾವುದೇ ಲಕ್ಷಣಗಳಿಲ್ಲದಿದ್ದರು ಕೂಡ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಗಂಗೂಲಿ ಪತ್ನಿ ಡೋನಾ ಅವರಿಗೆ ಕೊರೋನಾ ನೆಗೆಟಿವ್ ಬಂದಿದೆ. ಸದ್ಯ ಗಂಗೂಲಿ ಪುತ್ರಿ ಹಾಗೂ ನಾಲ್ವರು ಕುಟುಂಬ ಸದಸ್ಯರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಈ ಕುರಿತು ಗಂಗೂಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.