Sports

ಆದಷ್ಟು ಬೇಗ ಕಂಬ್ಯಾಕ್‌ ಮಾಡಲಿದ್ದೇನೆ : Hardik Pandya

ಹಾರ್ದಿಕ್‌ ಪಾಂಡ್ಯ ಸದ್ಯ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಕಳೆದ ಎರಡು  ವರ್ಷದಿಂದ ಗಾಯದ ಸಮಸ್ಯಯಿಂದ ಬಳಲುತ್ತಿರುವ ಪಾಂಡ್ಯ ಸದ್ಯದಲ್ಲಿಯೇ ಕಂಬ್ಯಾಕ್‌ ಮಾಡುವುದಾಗಿ ಹಿಂಟ್‌ ನೀಡಿದ್ದಾರೆ. ನನ್ನ ಕಂಬ್ಯಾಕ್‌ ಹೇಗಿರಲಿದೆ ಎಂದು ಕಾಲವೇ ಹೇಳಲಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಫಿಟ್ನೆಸ್‌ ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್‌ ಪಾಂಡ್ಯ ಸದ್ಯಕ್ಕೆ ಐಪಿಎಲ್‌ 2022ಗೆ ಸಿದ್ಧತೆ ನಡೆಸಿದ್ದಾರೆ. ಅಹಮದಾಬಾದ್‌ ತಂಡದ ನಾಯಕರಾಗಿರುವ ಹಾರ್ದಿಕ್‌ ಈ ಬಾರಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಕಳೆದ ಐಪಿಎಲ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡಿರಲಿಲ್ಲ. ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡದ ಕಾರಣ ಮುಂಬೈ ಇಂಡಿಯನ್ಸ್‌ ತಂಡ ಇವರನ್ನು ಕೈ ಬಿಟ್ಟಿತ್ತು. ಒಂದು ರೀತಿ ಅದೇ ಇವರಿಗೆ ವರವಾಗಿದೆ ಎನ್ನಬಹುದು. ಈಗ ಹಾರ್ದಿಕ್‌ ಅವರು ಅಹಮದಾಬಾದ್‌ ತಂಡದ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.

ಆಲ್‌ರೌಂಡರ್‌ ರೀತಿಯೇ ನಾನು ಕಂಬ್ಯಾಕ್‌ ಮಾಡ್ತೀನಿ. ನನಗೆ ಧೋನಿ ಭಾಯ್‌ ತುಂಬಾ ಸಪೋರ್ಟ್‌ ಮಾಡಿದ್ದಾರೆ. ನನಗೆ ಅವರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ, ಅವರು ನನ್ನ ಬೆನ್ನ ಹಿಂದೆ ನಿಂತಿದ್ದಾರೆ.  ಟಫ್‌ ಮ್ಯಾನ್‌ ಆಗಿ ಬರ್ತೀನಿ. ಸಂಪೂರ್ಣ ಆಲ್‌ರೌಂಡರ್‌ ಆಗಿ ನಾನು ಮತ್ತೆ ಬರುವೆ ಎಂದು ಖುದ್ದು ಪಾಂಡ್ಯ ಅವರೇ ಹೇಳಿದ್ದಾರೆ.

 

Share Post