CrimeInternational

ಪ್ರೇಯಸಿ ಸಿಗದಿದ್ದಕ್ಕೆ ಸೈಕೋ ಆದ; 5 ಮಹಿಳೆಯರನ್ನು ಚುಚ್ಚಿ ಕೊಂದ!

ಎಂಜಾಯ್‌ ಮಾಡಲು ಒಬ್ಬಳು ಪ್ರೇಯಸಿ ಸಿಗದಿದ್ದರಿಂದ ರೋಸಿಹೋಗಿದ್ದ ಸೈಕೋ ಒಬ್ಬರು ಐವರು ಮಹಿಳೆಯರನ್ನು ಚುಚ್ಚಿ ಚುಚ್ಚಿ ಕೊಂದಿದ್ದಾನೆ.. ಅದೃಷ್ಟವಶಾತ್‌ ಭಾರತೀಯ ಮಹಿಳೆಯೊಬ್ಬರು ಪಾರಾಗಿದ್ದಾರೆ.. ಆಸ್ಟ್ರೇಲಿಯಾದ ಸಿಡ್ನಿಯ ವೆಸ್ಟ್​ಫೀಲ್ಡ್​ ಮಾಲ್​ನಲ್ಲಿ ಇಂತಹದ್ದೊಂದು ಪೈಶಾಚಿಕ ಕೃತ್ಯ ನಡೆದಿತ್ತು.. ಈ ಘಟನೆ ಕಾರಣ ಈಗ ಬಯಲಾಗಿದೆ..

ವೆಸ್ಟ್​ಫೀಲ್ಡ್​ ಮಾಲ್​ನಲ್ಲಿ 6 ಜನರ ಸಾವಿಗೆ ಕಾರಣನಾದ ಸೈಕೋ ಹೆಸ್ರು ಜೋಯಲ್ ಕೌಚಿ.. ಘಟನೆ ವೇಳೆ ಪೊಲೀಸರು ಎನ್‌ಕೌಂಟರ್‌ ಮಾಡಿ ಆರೋಪಿಯನ್ನು ಸಾಯಿಸಿದ್ದಾರೆ.. ಜೋಯಲ್ ಕೌಚಿ ಯಾಕೆ ಹೀಗೆ ಮಾಡಿದ ಎಂಬುದರ ಬಗ್ಗೆ ಆತನ ತಂದೆ ಮಾತನಾಡಿದ್ದಾರೆ.. ಅವರು ಹೇಳಿರುವ ಮಾಹಿತಿ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ..

ಆರೋಪಿಗೆ ಒಬ್ಬಳೂ ಗರ್ಲ್‌ ಫ್ರೆಂಡ್‌ ಸಿಕ್ಕಿರಲಿಲ್ಲವಂತೆ.. ಇದರಿಂದ ತೀವ್ರ ಹತಾಶನಾಗಿದ್ದನಂತೆ..  ಶಿಜೋಫ್ರೆನಿಯಾ  ಎಂಬ ಮಾರಾಕ ಕಾಯಿಲೆಗೂ ತುತ್ತಾಗಿದ್ದನಂತೆ.  ಆತ ಯಾವಾಗ ತನಗೆ ಒಬ್ಬಳು ಪ್ರೇಯಸಿ ಬೇಕು ಎಂದು ಬಯಸುತ್ತಿದ್ದನಂತೆ.. ಅಷ್ಟೇ ಅಲ್ಲದೆ,  ಹುಚ್ಚನಂತೆ ಆಗಿದ್ದ ಅವನು ನೋಡುವವರಿಗೆ ರಕ್ಕಸನಂತೆ ಕಾಣುತ್ತಿದ್ದ. ಇದೇ ಕಾರಣಕ್ಕೆ ಆತ ಈ ರೀತಿಯ ಕೃತ್ಯವೆಸಗಿದ್ದಾನೆ ಎಂದು ತಂದೆ ಹೇಳಿಕೊಂಡಿದ್ದಾರೆ.

ಪಾಕಿಸ್ತಾನದ ಸೆಕ್ಯೂರಿಟಿ ಗಾರ್ಡ್​ ತಾಹಿರ್ (30), ಚೀನಾದ ಯಿಕ್ಸುವಾನ್ ಚೆಂಗ್ (27), ಜೇಡ್ ಯಂಗ್ (47), ಡಾನ್ ಸಿಂಗಲ್ಟನ್ (25), ಪಿಕ್ರಿಯಾ ಡಾರ್ಚಿಯಾ (55) ಮತ್ತು ಆಶ್ಲೀ ಗುಡ್ (38) ಈ 6 ಜನರು ಜೋಯಲ್ ಕೌಚಿಯ ಚೂರಿ ಇರಿತದಿಂದ ಸಾವನ್ನಪ್ಪಿದವರಾಗಿದ್ದಾರೆ.

 

Share Post