Sports

ಡೇಲ್‌ ಸ್ಟೇಯ್ನ್‌ ಈಗ ಸನ್‌ರೈಸರ್ಸ್‌ ತಂಡದ ಕೋಚ್

ಹೈದರಾಬಾದ್‌ : ಐಪಿಎಲ್‌ ಮೆಗಾ ಆಕ್ಷನ್‌ ಸಮೀಪಿಸುತ್ತಿರುವ ಹೊತ್ತಿನಲ್ಲೇ ತಂಡಗಳು ತಮ್ಮ ಸಪೋರ್ಟ್‌ ಸ್ಟಾಫ್‌ ಬದಲಾವಣೆ ಕಡೆಯೂ ಗಮನ ಹರಿಸಿದೆ. ಸನ್‌ರೈಸರ್ಸ್‌ ತಂಡ ಡೇವಿಡ್‌ ವಾರ್ನರ್‌ ಅವರನ್ನು ಕೈ ಬಿಟ್ಟ ನಂತರ ಈಗ ಮತ್ತೊಂದು ಮಹೊನ್ನತ ನಿರ್ಧಾರ ಮಾಡಿದೆ. ಡೇಯ್ಲ್‌ ಸ್ಟೇಯ್ನ್‌ ಅವರನ್ನು ಹೈದರಾಬಾದ್‌ ತಂಡದ ಫಾಸ್ಟ್‌ ಬೌಲಿಂಗ್‌ ಕೋಚ್‌ ಆಗಿ ಸೇರಿಸಿಕೊಳ್ಳಲಾಗಿದೆ.

ಸನ್‌ರೈಸರ್ಸ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಸಪೋರ್ಟ್‌ ಸ್ಟಾಫ್‌ ತಂಡದಲ್ಲಿ ಯಾರು ಯಾರು ಇದ್ದಾರೆ ಎಂದು ಒಂದು ವೀಡಿಯೋ ಮಾಡಿ ಹಂಚಿಕೊಂಡಿದೆ.

ಹೈದರಾಬಾದ್ ಸಪೋರ್ಟ್‌ ಸ್ಟಾಫ್‌ ಇಂತಿದೆ‌

ಹೆಮಂಗ್‌ ಬದಾನಿ – ಫೀಲ್ಡಿಂಗ್‌ ಕೋಚ್‌

ಸಿಮನ್‌ ಕ್ಯಾಟಿಚ್‌ – ಅಸಿಸ್ಟೆಂಟ್‌ ಕೋಚ್‌

ಡೇಯ್ಲ್‌ ಸ್ಟೇಯ್ನ್‌  – ಫಾಸ್ಟ್‌ ಬೌಲಿಂಗ್‌ ಕೋಚ್‌

ಟಾಮ್‌ ಮೂಡಿ – ಹೆಡ್‌ ಕೋಚ್‌

ಮುತ್ತಯ್ಯ ಮುರಳಿಧರನ್‌ – ಸ್ಪಿನ್‌ ಕೋಚ್‌

ಬ್ರಯನ್‌ ಲಾರಾ – ಬ್ಯಾಟಿಂಗ್‌ ಕೋಚ್‌

Share Post