NationalSports

ಒಂದೇ ಓವರ್‌ನಲ್ಲಿ ಏಳು ಸಿಕ್ಸರ್‌; ದಾಖಲೆ ಬರೆದ ಋತುರಾಜ್

ಅಹಮದಾಬಾದ್; ಒಂದೇ ಓವರ್‌ನಲ್ಲಿ ಏಳು ಸಿಕ್ಸರ್‌ ಸಿಡಿಸೋದು ಅಂದ್ರೆ ಸಾಮಾನ್ಯದ ಮಾತಾ..? ಎಲ್ಲರೂ ಮೋಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ವಿಚಾರ. ಆದ್ರೆ ಮಹಾರಾಷ್ಟ್ರ ತಂಡದ ನಾಯಕ ಋತುರಾಜ್‌ ಗಾಯಕ್ವಾಡ್‌ ಇದನ್ನು ಸಾಧಿಸಿ ತೋರಿಸಿದ್ದಾರೆ. 

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ 7 ಸಿಕ್ಸ್ ಸಿಡಿಸಿ ಋತುರಾಜ್‌ ದಾಖಲೆ ಬರೆದಿದ್ದಾರೆ. ಉತ್ತರ ಪ್ರದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಋತುರಾಜ್‌ ಗಾಯಕ್ವಾಡ್ ಈ ದಾಖಲೆ ಬರೆದಿದ್ದಾರೆ.

ಋತುರಾಜ್‌ ಅವರು ಇನ್ನಿಂಗ್ಸ್‌ನ 49ನೇ ಓವರ್‌ನಲ್ಲಿ 7 ಸಿಕ್ಸ್ ಸಹಿತ 43 ರನ್ ಚಚ್ಚಿದ್ದಾರೆ.  ಮೊದಲು ಮೂರು ಬಾಲ್‌ನಲ್ಲಿ ಮೂರು ಸಿಕ್ಸರ್‌ ಹೊಡೆದಿದ್ದ ಋತುರಾಜ್‌ ಅವರು 4ನೇ ಎಸೆತ ನೋಬಾಲ್ ಎಸೆದ ಕಾರಣ ಫ್ರೀ ಹಿಟ್ ಎಸೆತವನ್ನು ಸಿಕ್ಸ್ ಬಾರಿಸಿದರು. ಮುಂದಿನ 3 ಎಸೆತಗಳನ್ನೂ ಸಿಕ್ಸರ್‌ ಬಾರಿಸಿದರು.

ಅಷ್ಟೇ ಅಲ್ಲದೇ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿದು ಅಜೇಯ 220 ರನ್  ಸಿಡಿಸಿ ದ್ವಿಶತಕ ದಾಖಲಿಸಿದರು. ಮಹಾರಾಷ್ಟ್ರದ ಬೃಹತ್‌ ಮೊತ್ತಕ್ಕೆ ಕಾರಣರಾದರು.

Share Post