Crime

ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ; ಟ್ರಕ್‌ ಪಲ್ಟಿಯಾಗಿ ನಾಲ್ವರ ದುರ್ಮರಣ

ಆಂಧ್ರಪ್ರದೇಶ: ಇಲ್ಲಿನ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಂ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ನಾಲ್ವರು ದಾರುಣ ಸಾವಿಗೀಡಾಗಿದ್ದಾರೆ. ಮೀನು ಸಾಗಿಸುತ್ತಿದ್ದ ಟ್ರಕ್‌ ಒಂದು ತಾಡೆಪಲ್ಲಿಗುಡೆಂ ಬಳಿ ಪಲ್ಟಿಯಾಗಿದ್ದರಿಂದ ಈ ದುರಂತ ನಡೆದಿದೆ. ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

   ಇಂದು ಮುಂಜಾನೆಯೇ ತಾಡೆಪಲ್ಲಿಗುಡೆಂನಿಂದ ಮೀನು ತುಂಬಿಕೊಂಡು ಟ್ರಕ್‌ ಹೊರಟಿತ್ತು. ಈ ವೇಳೆ ಟ್ರಕ್‌ ಚಾಲಕನ ನಿಯಂತ್ರಣ ತಪ್ಪಿ, ಪಲ್ಟಿಯಾಗಿದೆ. ಅಂದಹಾಗೆ, ಮುಂಜಾನೆಯೇ ಟ್ರಕ್‌ ಓಡಿಸುತ್ತಿದ್ದರಿಂದ ಚಾಲಕ ನಿದ್ದೆ ಮಾಡಿರಬಹುದು. ಇದ್ರಿಂದ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಹತ್ತು ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

Share Post