Sports

IPL Update : ಧೋನಿಯನ್ನುಉಳಿಸಿಕೊಳ್ಳಲಿದೆ ಚೆನ್ನೈ; ರೈನಾ ಡೌಟ್‌

IPL 2022 ಮೆಗಾ ಆಕ್ಷನ್‌ ಇನ್ನೇನು ಕೆಲವೇ ದಿನಗಳಲ್ಲಿ ಶುರು ಆಗಲಿದೆ. ಈ ಸಂದರ್ಭದಲ್ಲಿ ಸಿಎಸ್‌ಕೆ ತಂಡದಿಂದ ಸುದ್ದಿಯೊಂದು ಹೊರ ಬಿದ್ದಿದೆ. ಚೆನ್ನೈ ಟೀಂ ಅವರು ಧೋನಿಯನ್ನು ರಿಟೈನ್‌ ಮಾಡಲು ನಿರ್ಧರಿಸಿದ್ದಾರೆ. ಚೆನೈ ಫ್ರಾಂಚೈಸಿ ಈಗಾಗಲೇ ೪ ಬಾರಿ ಕಿರೀಟ ಮುಡಿಗೇರಿಸಿಕೊಂಡು ಅತ್ಯಂತ ಯಶಸ್ವಿ ತಂಡವೆನಿಸಿಕೊಂಡಿದೆ.

ನನ್ನನ್ನು ಉಳಿಸಿಕೊಳ್ಳೋದರಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುತ್ತೆ. ಅದರ ಬದಲು ಹೊಸಬರಿಗೆ ಮಣೆ ಹಾಕಿ ಎಂದು ಧೋನಿ ಹೇಳಿದ್ದರೂ ಕೂಡ ಅವರನ್ನು ಚೆನ್ನೈ ಫ್ರಾಂಚೈಸಿ ಉಳಿಸಿಕೊಳ್ಳುವ ನಿರ್ಧಾರ ಮಾಡಿದೆ.

ಒಂದು ತಂಡ ಕೇವಲ ನಾಲ್ಕು ಆಟಗಾರರನ್ನು ಮಾತ್ರ ರೀಟೈನ್‌ ಮಾಡಲು ಅವಕಾಶ ಇದೆ. ಧೋನಿ, ರುತುರಾಜ್‌ ಗಾಯಕ್ವಾಡ್‌, ರವೀಂದ್ರ ಜಡೇಜಾ ಅವರನ್ನು ರಿಟೈನ್‌ ಮಾಡುವ ನಿರ್ಧಾರ ಮಾಡಿದೆ ಚೆನೈ ಫ್ರಾಂಚೈಸಿ. ಮೋಯಿನ್‌ ಅಲಿ ಅವರ ಜೊತೆಗೂ ಮಾತುಕತೆ ನಡೆದಿದೆ. ಒಂದು ವೇಳೆ ಅವರು ಒಪ್ಪದಿದ್ದರೆ ಸ್ಯಾಮ್‌ ಕರ್ರನ್‌ ಅವರನ್ನು ರೀಟೈನ್‌ ಮಾಡುವ ಸಾಧ್ಯತೆ ಹೆಚ್ಚಿದೆ. ಇನ್ನು ರೈನಾ ಅವರನ್ನು ಕೂಡ ಆಕ್ಷನ್‌ಗೆ ಬಿಡಲಿದೆ ಚೆನೈ ತಂಡ.

Share Post