Districts

ವಿಜಯಪುರ-ಮಹಾರಾಷ್ಟ್ರ ಬಸ್‌ ಸಂಚಾರ ತಾತ್ಕಾಲಿಕ ಸ್ಥಗಿತ

ವಿಜಯಪುರ: ಎಂಇಎಸ್‌ ಹಾಗೂ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟು, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿದ ಹಿನ್ನೆಲೆಯಲ್ಲಿ ಎರಡು ರಾಜ್ಯಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.ಮಹಾರಾಷ್ಟ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ಗಳಿಗೆ ಎಂಇಎಸ್ ಕಾರ್ಯಕರ್ತರು ಹಾನಿ ಮಾಡುತ್ತಿರುವ ಹಿನ್ನೆಲೆ ಆ ರಾಜ್ಯಕ್ಕೆ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಮಹಾರಾಷ್ಟ್ರಕ್ಕೆ ಹೊರಡುತ್ತಿದ್ದ ಎಲ್ಲಾ ಬಸ್​ ಸಂಚಾರ ಬಂದ್​ ಮಾಡಲಾಗಿದೆ. ವಿಜಯಪುರದಿಂದ ಪ್ರತಿ ನಿತ್ಯ 111 ಸರ್ಕಾರಿ ಬಸ್​ಗಳು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದವು. ಇದೀಗ ಎಲ್ಲಾ ಬಸ್​ಗಳ ಸಂಚಾರ ಬಂದ್ ಮಾಡಲಾಗಿದೆ. ಈ ಪರಿಸ್ಥಿತಿ ನಿಯಂತ್ರಿಸುವವರೆಗೂ ಮಹಾರಾಷ್ಟ್ರಕ್ಕೆ ಬಸ್‌ ಗಳನ್ನು ಪ್ರಾರಂಭಿಸಲಾಗಿದೆ.
ಕರ್ನಾಟಕ ಗಡಿಭಾಗದವರೆಗೆ ಮಾತ್ರ ಸಾರಿಗೆ ಬಸ್​ಗಳು ಸಂಚಾರ ನಡೆಸಲಿದ್ದು, ಅಲ್ಲಿಂದ ವಾಪಸ್ ವಿಜಯಪುರಕ್ಕೆ ತೆರಳಲಿವೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಎಂಇಎಸ್‌ ಪುಂಡಾಟಕ್ಕೆ ವಿರೋಧಿಸಿ ಇದೇ ತಿಂಗಳು ೩೧ಕ್ಕೆ ರಾಜ್ಯ ಬಂದ್‌ ಗೆ ಕರೆ ನೀಡಿದ್ದಾರೆ. ವಾಟಾಳ್‌ ನಾಗರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಇದಕ್ಕೆ ಹಲವಾರು ಸಂಘಟನೆಗಳು ಸಾಥ್‌ ನೀಡುತ್ತೀವೆ

Share Post