Districts

ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ಪ್ರತಾಪ್‌ ಸಿಂಹ

ಮೈಸೂರು : ಸಂಸದ ಪ್ರತಾಪ್‌ ಸಿಂಹ ತಮ್ಮ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ. ಕೊರೊನಾ ಮೂರನೇ ಅಲೆಯ ಸಂಬಂಧ ರಾಜ್ಯ ಸರ್ಕಾರವು ವೀಕೆಂಡ್‌ ಲಾಕ್‌ ಡೌನ್‌, ನೈಟ್‌ ಕರ್ಫ್ಯೂ ವಿಧಿಸಿದೆ. ಇದನ್ನು ವಿರೋಧಿಸಿ ಪ್ರತಾಪ್‌ ಸಿಂಹ ಮಾತನಾಡಿದ್ದಾರೆ.

ವೀಕೆಂಡ್ ಕರ್ಫ್ಯೂ, ಲಾಕ್ ಡೌನ್ ವಿಧಿಸುವದಾದರೆ ವ್ಯಾಕ್ಸಿನ್ ಯಾಕೆ ಬೇಕಿತ್ತು ಎಂದು ತಮ್ಮ ಸರ್ಕಾರವನ್ನೇ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್‌ ಸಿಂಹ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ ಪ್ರಚಾರ ಮತ್ತು ರ್ಯಾಲಿ ಎಲ್ಲವೂ ನಡೆಯಲಿದೆ ತಾನೇ ? ನಮ್ಮ ರಾಜ್ಯದಲ್ಲಿ ಏಕೆ ನಿರ್ಬಂಧ ಎಂದು ಪ್ರಶ್ಮಿಸಿದ್ದಾರೆ.

ಜನರನ್ನು ಭಿತಿಗೆ ತಳ್ಳುವುದನ್ನು ಸರ್ಕಾರ ಮೊದಲು ನಿಲ್ಲಿಸಬೇಕು. ಎಲ್ಲಾ ವರ್ಗದ ಜನರಿಗೂ ಇದರಿಂದ ತೊಂದರೆ ಉಂಟಾಗ್ತಿದೆ. ಜನರಿಗೆ ಜೀವ, ಜೀವನ ಎರಡು ಬೇಕು. ಜೀವ ಉಳಿಸಿ ಕೊಳ್ಳಲು ವ್ಯಾಕ್ಸಿನ್ ಕೊಟ್ಟಿದ್ದೇವೆ. ಈಗ ಜೀವನ ಉಳಿಸಿಕೊಳ್ಳಲು ಅವಕಾಶ ನೀಡಬೇಕಿದೆ. ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಈ ಬಗ್ಗೆ ಶುಕ್ರವಾರ ಉತ್ತಮ ನಿರ್ಧಾರಕ್ಕೆ ಬರಲಿದ್ದಾರೆ ಎಂದು ನಂಬಿದ್ದೇನೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

Share Post