Politics

ಕಸ ಆಯ್ದ ಯದುವೀರ್‌ ಹಾಗೂ ತ್ರಿಷಿಕಾ; ಮಿಶ್ರ ಪ್ರತಿಕ್ರಿಯೆ..!

ಮೈಸೂರು; ನಿನ್ನೆ ಮೈಸೂರಿನಲ್ಲಿ ಮೋದಿ ಹಾಗೂ ದೇವೇಗೌಡರ ನೇತೃತ್ವದಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿತ್ತು.. ಸಾವಿರಾರು ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.. ಹೀಗಾಗಿ ಮೈದಾನದಲ್ಲಿ ರಾಶಿ ರಾಶಿ ಕಸ ಸಂಗ್ರಹವಾಗಿತ್ತು.. ಈ ಕಸವನ್ನು ಬಿಜೆಪಿ ಅಭ್ಯರ್ಥಿ ಯದುವೀರ್‌ ಹಾಗೂ ಅವರ ಪತ್ನಿ ತ್ರಿಷಿಕಾ ಅವರು ಆಯ್ದರು.. ಈ ಮೂಲಕ ನಾವೂ ಜನಸಾಮಾನ್ಯರೇ ಎಂದು ತೋರಿಸಿದರು.

ಇದನ್ನೂ ಓದಿ; ಹೊಸ ಹಾಗೂ ಹಳೇ ತೆರಿಗೆ ವಿಧಾನದಲ್ಲಿ ಉದ್ಯೋಗಿಗಳಿಗೆ ಯಾವುದು ಒಳ್ಳೆಯದು..?

ರಾಜವಂಶಸ್ಥರಾಗಿರುವ ಯದುವೀರ್‌ ಅವರು ಜನಪ್ರತಿನಿಧಿಯಾಗುವ ಸಲುವಾಗಿ ಲೋಕಸಭೆಗೆ ಸ್ಪರ್ಧೆ ಮಾಡಿದ್ದಾರೆ.. ಈಗ ಅವರು ನಾನು ಜನಸಾಮಾನ್ಯನಂತೆ ತೋರಿಸಿಕೊಳ್ಳಬೇಕಿದೆ.. ಹೀಗಾಗಿ ಅವರು ಪತ್ನಿ ಸಮೇತ ಬಂದು ಮೈದಾನ ಸ್ವಚ್ಛ ಮಾಡಿದ್ದಾರೆ.. ಯದುವೀರ್‌ ಅವರ ಈ ಕಾರ್ಯವನ್ನು ಹಲವರು ಮೆಚ್ಚಿದ್ದಾರೆ.. ಇನ್ನು ಕೆಲವರು, ರಾಜವಂಶಸ್ಥರನ್ನು ನಾವು ಈಗಲೂ ರಾಜರೆಂದೇ ಗೌರವಿಸುತ್ತೇವೆ.. ಮೈಸೂರಿಗೆ ಅವರ ಕೊಡುಗೆ ಅಪಾರವಾದದ್ದು, ಅವರು ಇಂತಹ ಕೆಲಸ ಮಾಡಬಾರದಿತ್ತು ಎಂದು ಕೆಲವರು ಹೇಳಿದ್ದಾರೆ..

ಇದನ್ನೂ ಓದಿ; ಮಂಡ್ಯದಲ್ಲಿ ಕಬ್ಬಿನ ಗದ್ದೆಗೆ ಉರುಳಿದ ಕಾರು; ರಾಯಚೂರಲ್ಲಿ ಪೊಲೀಸ್‌ ಜೀಪ್‌ ಪಲ್ಟಿ

ಯದುವೀರ್ ಹಾಗೂ ಪತ್ನಿ ತ್ರಿಷಿಕಾ ಅವರು ಮಾಸ್ಕ್‌ ಧರಿಸಿ ಬಿದ್ದಿದ್ದ ಕಸವನ್ನು ತೆಗೆದಿದ್ದಾರೆ. ಈ ಮೂಲಕ ನಾನು ಮಹಾರಾಜ ಅಲ್ಲ ಸಾಮಾನ್ಯ ಪ್ರಜೆ ಎಂದು ತೋರಿಸಿದ್ದಾರೆ.. ಈ ವೇಳೆ ಸ್ಥಳೀಯರು ಕೂಡಾ ಅವರಿಗೆ ಸಾಥ್‌ ಕೊಟ್ಟಿದ್ದಾರೆ.. ಬೇರೆ ಜನಪ್ರತಿನಿಧಿಯಾಗಿದ್ದರೆ ಇದೊಂದು ಪ್ರಚಾರ ತಂತ್ರ ಎಂದು ಜನ ಹೇಳುತ್ತಿದ್ದರು.. ಆದ್ರೆ ರಾಜವಂಶಸ್ಥರನ್ನು ಮೈಸೂರು ಜನ ಈಗಲೂ ಅತ್ಯಂತ ಗೌರವದಿಂದ ನೋಡುತ್ತಾರೆ.. ಹೀಗಾಗಿಯೇ ಮೈಸೂರು ದಸರಾ ಅಂದ್ರೆ ಇಡೀ ವಿಶ್ವಕ್ಕೇ ಹೆಸರಾಗಿದೆ.. ಹೀಗಾಗಿ, ರಾಜವಂಶಸ್ಥರು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಓಕೆ.. ಆದ್ರೆ ಇದೆಲ್ಲಾ ಮಾಡಬಾರದಾಗಿತ್ತು ಎಂದೂ ಕೆಲವರು ಹೇಳುತ್ತಿದ್ದಾರೆ..

ಇದನ್ನೂ ಓದಿ; ಮತ್ತೆ ಡಿಕೆಶಿ ಬಾಯಲ್ಲಿ ಸಿಎಂ ಸ್ಥಾನದ ಮಾತು; ದೆಹಲಿಯಲ್ಲಾದ ತೀರ್ಮಾನ ಏನು..?

 

Share Post