ಪ್ರಧಾನಿ ಮೋದಿಗಾಗಿ ಸಿದ್ದಗೊಂಡ ವಿಶೇಷ ಅಡಿಕೆ ಪೇಟಾ, ಅಡಿಕೆ ಹಾರ.
ತುಮಕೂರು: ಕಲ್ಪತರು ನಾಡು ತುಮಕೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಯವರಿಗೆ ವಿಶೇಷವಾಗಿ ಸ್ವಾಗತಿಸಲು ತುಮಕೂರು ಸಜ್ಜಾಗಿದೆ.
ತುಮಕೂರಿನ ಗುಬ್ಬಿಯಲ್ಲಿರುವ ಹೆಚ್ ಎ ಎಲ್ ಲೋಕಾರ್ಪಣೆ ಮಾಡಲು ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಈ ವೇಳೆ ಪ್ರಧಾನಿಯವರಿಗೆ ಅಡಿಕೆಯಿಂದ ತಯಾರಿಸ ಪೇಟ, ಹಾಗೂ ಅಡಿಕೆಯಿಂದ ತಯಾರಾದ ಹಾರವನ್ನ ಹಾಕುವ ಮೂಲಕ ಸ್ವಾಗತಿಸಲು ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ತೆಂಗು ಜೊತೆ ಅಡಿಕೆ ಕೂಡ ಪ್ರಮುಖ ಬೆಳೆಯಾಗಿದ್ದು ಗುಬ್ಬಿ ತಾಲ್ಲೂಕಿನಲ್ಲಿ ತೆಂಗಿನ ಜೊತೆಗೆ ಮಿಶ್ರ ಬೆಳೆಯಾಗಿ ಅತಿ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಇದರ ಸಂಕೇತವಾಗಿ ಅಡಿಕೆಯಿಂದಲೇ ಪೇಟಾ ಹಾಗೂ ಹಾರ ತಯಾರಿಸಲಾಗಿದೆ.
ಈ ಅಡಿಕೆ ಪೇಟಾ ಹಾಗೂ ಹಾರವನ್ನ ಗುಬ್ಬಿ ತಾಲ್ಲೂಕಿನ ಚಿಕ್ಮೊನಹಳ್ಳಿ ಪಾಳ್ಯದ ನಟರಾಜ್ ಅವರು ತಯಾರಿಸಿದ್ದಾರೆ. ಸುಮಾರು 300 ಗ್ರಾಂ ಅಡಿಕೆಯಿಂದ ಪೇಟಾ ತಯಾರಾಗಿದೆ, ಒಂದು ಕೆ ಜಿ ಗೂ ಅಧಿಕ ತೂಕದ ಅಡಿಕೆಯಿಂದ ಹಾರ ತಯಾರಾಗಿದೆ.
ಪ್ರಧಾನಿ ಮೋದಿಯವರಿಗೆ ಪೇಟಾ, ಮತ್ತು ಹಾರ ತೋಡಿಸಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳ ಪ್ರತಿಮೆಯನ್ನ ಪ್ರಧಾನಿ ಮೋದಿಯವರಿಗೆ ವಿಶೇಷವಾಗಿ ಅಭಿನಂದನೆಗಳನ್ನ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದ್ದಾರೆ.