Politics

ಚಿಕ್ಕಬಳ್ಳಾಪುರ ಗೆಲ್ತಾರಾ ಡಾ.ಕೆ.ಸುಧಾಕರ್‌..?; ಮಾಜಿ ಸಚಿವರಿಗೆ ಅಷ್ಟೊಂದು ವಿಶ್ವಾಸ ಬಂದಿದ್ದೇಗೆ..?

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲೋದು ಯಾರು..? ಈ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.. ಕಾಂಗ್ರೆಸ್‌ ಕಾರ್ಯಕರ್ತರನ್ನು ಕೇಳಿದರೆ ನೋಡಬೇಕು, ಕಷ್ಟ ಇದೆ.. ಇಬ್ಬರಿಗೂ ಫಿಫ್ಟಿ ಫಿಫ್ಟಿ ಚಾನ್ಸಸ್‌ ಅಂತಾರೆ.. ಅದೇ ಬಿಜೆಪಿಯವರನ್ನು ಕೇಳಿದರೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಗೆಲುವು ಪಕ್ಕಾ ಎಂದು ಹೇಳುತ್ತಿದ್ದಾರೆ.. ವಿಧಾನಸಭಾ ಚುನಾವಣೆ ಸೋಲಿನ ನಂತರ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಕಂಗೆಟ್ಟಿದ್ದರು.. ಅಂದು ಮಾಡಿದ ತಪ್ಪುಗಳನ್ನೆಲ್ಲಾ ಸರಿ ಮಾಡಿಕೊಂಡು ಲೋಕಸಭಾ ಅಖಾಡಕ್ಕಿಳಿದಿದ್ದರು.. ಅವರು ಲೋಕಸಭಾ ಚುನಾವಣೆಯಲ್ಲಿ ಮಾಡಿದ ತಂತ್ರಗಾರಿಕೆಗಳೆಲ್ಲಾ ಫಲಿಸಿವೆ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ.. ಹೀಗಾಗಿಯೇ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅತ್ಯುತ್ಸಾಹದಿಂದ ಓಡಾಡುತ್ತಿದ್ದಾರೆ.. ಆದ್ರೆ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಸುಳಿವಿಲ್ಲ..

ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರು ಮತದಾನದ ನಂತರ ಆಂಧ್ರಪ್ರದೇಶದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ಹೊತ್ತಿದ್ದರು.. ಅನಂತರ ಅವರು ಕ್ಷೇತ್ರಕ್ಕೆ ಹಿಂತಿರುಗಿದ್ದಾರೆ.. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ-ಜೆಡಿಎಸ್‌ ಮುಖಂಡರ ಸಭೆಗಳನ್ನು ನಡೆಸಿ, ವೋಟ್‌ ಷೇರ್‌ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ.. ಕಾಂಗ್ರೆಸ್‌ ಪ್ರಾಬಲ್ಯವಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲೂ ಹತ್ತರಿಂದ ಹದಿನೈದು ಸಾವಿರ ಲೀಡ್‌ ಬರುವ ವಿಶ್ವಾಸದಲ್ಲಿ ಸುಧಾಕರ್‌ ಇದ್ದಾರೆ.. ಬಹುತೇಕ ಗೆಲುವು ನಮ್ಮದೇ ಎಂದು ಬಿಜೆಪಿ ಸ್ಥಳೀಯ ಮುಖಂಡರು ಹೇಳುತ್ತಿದ್ದಾರೆ.. ಕಾಂಗ್ರೆಸ್‌ ಮುಖಂಡರು ಕೂಡಾ ನಮ್ಮ ಅಭ್ಯರ್ಥಿ ಗೆಲ್ಲೋದು ಕಷ್ಟವೇ ಇದೆ ಎಂಬಂತೆಯೇ ಮಾತನಾಡುತ್ತಿದ್ದಾರೆ… ಇತ್ತ ಸುಧಾಕರ್‌ ಉತ್ಸಾಹದಿಂದ ಓಡುತ್ತಿರುವುದು ನೋಡಿದರೆ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ಗೆ ವಿಜಯಲಕ್ಷ್ಮೀ ಒಲಿದಿದ್ದಾಳಾ ಎಂಬ ಪ್ರಶ್ನೆ ಮೂಡುತ್ತದೆ..

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ನಾಲ್ಕೂವರೆ ಲಕ್ಷಕ್ಕೂ ಹೆಚ್ಚಿವೆ.. ಬಿಜೆಪಿ ಅಭ್ಯರ್ಥಿ ಸುಧಾಕರ್‌ ಅವರು ಕೂಡಾ ಒಕ್ಕಲಿಗ ನಾಯಕರು.. ಹೀಗಾಗಿ, ಅವರು ಒಕ್ಕಲಿಗರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದರು.. ಜೆಡಿಎಸ್‌ ಬೆಂಬಲ ಕೂಡಾ ಇದ್ದಿದ್ದರಿಂದ ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಈ ಬಾರಿ ಬಿಜೆಪಿಗೆ ಒಲಿದಿವೆ ಎಂದು ಹೇಳಲಾಗಿದೆ.. ಜೊತೆಗೆ ಆರೂವರೆ ಲಕ್ಷ ಮತಗಳನ್ನು ಹೊಂದಿರುವ ದಲಿತ ಸಮುದಾಯ ಕೂಡಾ ಹೆಚ್ಚಿನ ಮಟ್ಟದಲ್ಲಿ ಬಿಜೆಪಿಗೆ ಮತ ಹಾಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ..

ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಬಲಿಜ ಸಮುದಾಯಕ್ಕೆ ಸೇರಿದವರು.. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಲಿಜ ಸಮುದಾಯದ ಮತಗಳು ಸುಮಾರು ಒಂದು ಲಕ್ಷದ ಅರವತ್ತು ಸಾವಿರದಷ್ಟಿವೆ.. ಆದ್ರೆ ಬಲಿಜಿಗರ ಎಲ್ಲಾ ಮತಗಳೂ ರಕ್ಷಾ ರಾಮಯ್ಯ ಅವರಿಗೆ ಬಿದ್ದಿಲ್ಲ ಎಂದೇ ಹೇಳಲಾಗುತ್ತಿದೆ.. ಯಾಕಂದ್ರೆ ಹಲವು ಬಲಿಜ ಮುಖಂಡರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು.. ಹೀಗಾಗಿ ಬಲಿಜ ಮತಗಳು ಹಂಚಿಹೋಗಿವೆ ಎಂದು ಹೇಳಲಾಗುತ್ತಿದೆ.. ಇನ್ನೊಂದೆಡೆ ಕಾಂಗ್ರೆಸ್‌ ಪ್ರಾಬಲ್ಯವಿರುವ ಬಾಗೇಪಲ್ಲಿ, ಗೌರಿಬಿದನೂರು, ಹೊಸಕೋಟೆ ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಹೆಚ್ಚಿನ ಮತಗಳನ್ನು ಗಳಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ..

ಕಳೆದ ಬಾರಿ ಸೋತ ಕಾರಣಕ್ಕಾಗಿ ಡಾ.ಕೆ.ಸುಧಾಕರ್‌ಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮತಗಳು ಬಂದಿವೆ ಎಂದೂ ಹೇಳಲಾಗುತ್ತಿದೆ.. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್‌ ಬರುತ್ತಿದೆ ಎಂಬ ಲೆಕ್ಕಾಚಾರಗಳಿವೆ.. ಈ ನಡುವೆ, ಈ ಬಾರಿಯೂ ಸುಧಾಕರ್‌ ಅವರನ್ನು ಸೋಲಿಸುತ್ತೇವೆ ಎಂದು ಹೇಳುತ್ತಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಚುನಾವಣೆಯ ನಂತರ ಸೈಲೆಂಟ್‌ ಆಗಿದ್ದಾರೆ.. ಅವರಿಗೂ ಕೂಡಾ ಕಾಂಗ್ರೆಸ್‌ ಗೆಲುವಿನ ಬಗ್ಗೆ ವಿಶ್ವಾಸ ಇಲ್ಲ ಎಂದೇ ಹೇಳಲಾಗುತ್ತಿದೆ..

Share Post