ಸಂತೋಷಕ್ಕೆ 7 ಸೂತ್ರಗಳು; ಇವನ್ನು ಪಾಲಿಸಿದೆ ಲೈಫ್ ಜಿಂಗಾಲಾಲ..
ಜೀವನದಲ್ಲಿ ಎಲ್ಲವೂ ಇರುತ್ತದೆ, ಆದ್ರೆ ಖುಷಿಯೇ ಇರೋದಿಲ್ಲ.. ಇದು ಬಹುತೇಕ ಉಳ್ಳವರ ಸಮಸ್ಯೆ.. ರಾಜವೈಭೋಗ ಅನುಭವಿಸೋಕೆ ಆಸ್ತಿ, ಅಂತಸ್ತು ಎಲ್ಲವೂ ಹೊಂದಿರುತ್ತಾರೆ.. ಆದ್ರೆ, ಅವರಿಗೆ ಸಂತೋಷವನ್ನು ಕೊಂಡುಕೊಳ್ಳೋದಕ್ಕೆ ಆಗುತ್ತಿರುವುದಿಲ್ಲ.. ಯಾಕಂದ್ರೆ ಸಂತೋಷ ಅನ್ನೋದು ಹಣ, ಆಸ್ತಿ, ಅಂತಸ್ತು, ಅಧಿಕಾರದಿಂದ ಕೊಂಡುಕೊಳ್ಳೋದಕ್ಕೆ ಸಾಧ್ಯವೇ ಇಲ್ಲ.. ಸಂತೋಷದ ಜೀವನದ ಸೂತ್ರಗಳು ಬೇರೆಯೇ ಇವೆ.. ಹಣ, ಆಸ್ತಿ, ಅಂತಸ್ತಿಗೆ ಬದಲಾಗಿ ನಮ್ಮ ನಡವಳಿಕೆ, ನಾವು ನಡೆಸುವ ಜೀವನ, ನಾವು ತಿನ್ನುವ ಆಹಾರದಿಂದಾಗಿ ನಾವು ಸಂತೋಷವನ್ನು ಪಡೆಯಬಹುದು.. ಹೀಗಾಗಿ ಪ್ರತಿಯೊಬ್ಬರೂ ಏಳು ಸಂತೋಷ ಸೂತ್ರಗಳನ್ನು ಅನುಸರಿಸಿದರೆ ಜೀವನ ಅದ್ಭುತವಾಗಿರುತ್ತದೆ.. ಆಸ್ತಿ, ಅಂತಸ್ತು ಇಲ್ಲದಿದ್ದರೂ ಖುಷಿಯಿಂದ, ಆರೋಗ್ಯದಿಂದ ಜೀವನ ಮಾಡಬಹುದು..
ದೇಹದ ಆರೋಗ್ಯಕ್ಕೆ ಪೌಷ್ಠಿಕ ಆಹಾರ ತುಂಬಾನೇ ಮುಖ್ಯ.. ಅದೇ ರೀತಿ ಖುಷಿಯ ಜೀವನಕ್ಕೆ ಕೂಡಾ ಒಂದಷ್ಟು ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ.. ಆಗ ಮಾತ್ರ ನಮ್ಮ ಜೀವನ ಪರಿಪೂರ್ಣವಾಗುತ್ತದೆ.. ಹೀಗಾಗಿ ಖುಷಿಯ ಜೀವನಕ್ಕಾಗಿ ಈ ಏಳು ಸೂತ್ರಗಳನ್ನು ಅನುಸರಿಸಬೇಕು..
1. ಪ್ರತಿನಿತ್ಯ ಸರಳ ವ್ಯಾಯಾಮ;
ಮುಂಜಾನೆ ಎದ್ದಾಕ್ಷಣ ಎಲ್ಲರೂ ತಪ್ಪದೆ ನಿತ್ಯ ಕರ್ಮಗಳನ್ನು ಪೂರೈಸುತ್ತಾರೆ.. ಅದೇ ರೀತಿ ಈ ಸಮಯದಲ್ಲಿ ವ್ಯಾಯಾಮ ಕೂಡಾ ಅಷ್ಟೇ ಮುಖ್ಯವಾಗುತ್ತದೆ.. ನಮ್ಮ ದೇಹಕ್ಕೆ ಒಗ್ಗುವ ಒಂದಷ್ಟು ಸರಳ ವ್ಯಾಯಾಮಗಳನ್ನು ಮಾಡುವುದು ತುಂಬಾನೇ ಒಳ್ಳೆಯದು.. ಇದರಿಂದಾಗಿ ನಮ್ಮ ದೇಹದಲ್ಲಿ ಚಾಯಾಪಚಯ ಕ್ರಿಯೆಗಳು ಚೆನ್ನಾಗಿ ನಡೆಯುತ್ತವೆ.. ಇದು ನಮ್ಮನ್ನು ದಿನವಿಡೀ ಉತ್ಸಾಹದಿಂದ ಇರುವಂತೆ ಮಾಡುತ್ತದೆ.. ಸಣ್ಣ ವ್ಯಾಯಾಮ ಕೂಡಾ ನಮ್ಮನ್ನು ದಿನವಿಡೀ ಕ್ರಿಯಾಶೀಲರನ್ನಾಗಿ ಇರಿಸುತ್ತದೆ..
2. ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಿ;
ತರಕಾರಿಗಳನ್ನು ತಿನ್ನುವುದು ದೇಹಕ್ಕೆ ತುಂಬಾನೇ ಒಳ್ಳೆಯದು.. ತರಕಾರಿಗಳು ಹೆಚ್ಚು ಸೇವಿಸುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.. ಆರೋಗ್ಯ ಚೆನ್ನಾಗಿದ್ದರೆ ನಮ್ಮ ಮನಸ್ಸು ಕೂಡಾ ಚೆನ್ನಾಗಿರುತ್ತದೆ.. ಯಾವುದೇ ಕೆಲಸ ಮಾಡುವುದಕ್ಕೆ ನಮ್ಮ ದೇಹ ಸಹಕರಿಸುತ್ತದೆ.. ಕೆಲಸದಲ್ಲಿ ಉತ್ಸಾಹ ಮೂಡುತ್ತದೆ.. ಕಾಲಕಾಲಕ್ಕೆ ಬರುವ ಹಣ್ಣು, ತರಕಾರಿಗಳು ಹೆಚ್ಚಾಗಿ ಸೇವಿಸುವುದರಿಂದ ನಮ್ಮ ದೇಹವನ್ನು ಆರೋಗ್ಯವಾಗಿರುವಂತೆ ಮಾಡಬಹುದು.. ನಮಗೆ ಯಾವುದೇ ಕಾಯಿಲೆ ಬರದಂತೆ ನೋಡಿಕೊಂಡರೆ ನಾವು ಸಂತೋಷವಾಗಿಯೇ ಇರುತ್ತೇವೆ..
3. ಪ್ಲಾನಿಂಗ್ ಇರಲಿ;
ಬಹುತೇಕರು ಹಸಿವಾಗುವವರೆಗೂ ಸುಮ್ಮನಿರುತ್ತಾರೆ.. ಆಗ ಆಹಾರ ತಯಾರಿಸಲು ಮುಂದಾಗುತ್ತಾರೆ.. ಹಾಗೆ ಮಾಡಿದರೆ ಸರಿಯಾಗಿ ಹಾಗೂ ಆರೋಗ್ಯಕರವಾಗಿ ಆಹಾರ ತಯಾರಿಸೋದಕ್ಕೆ ಆಗೋದಿಲ್ಲ.. ಜೊತೆಗೆ ಹಸಿವಾಗಿದೆ ಅಂತ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಾರೆ.. ಹೀಗೆ ಮಾಡುವುದರಿಂದ ಆರೋಗ್ಯ ಹಡೆಗೆಡುತ್ತದೆ.. ಇದು ನಿಮ್ಮ ಸಂತೋಷವನ್ನು ಕಿತ್ತುಕೊಳ್ಳುತ್ತದೆ.. ಹೀಗಾಗಿ ಆಹಾರ ಕ್ರಮದಲ್ಲಿ ಪ್ಲಾನಿಂಗ್ ಇರಲಿ.. ಸಮಯಕ್ಕೆ ಸರಿಯಾಗಿ ಪೋಷಕಾಂಶಯುಕ್ತ ಆಹಾರಗಳನ್ನು ತಯಾರಿಸಿಕೊಂಡು ಸೇವನೆ ಮಾಡಿ.. ಇನ್ನು ಹೊರಗೆ ಹೋಗುವಾಗ ಸಾಧ್ಯವಾದಷ್ಟು ಮನೆಯ ಆಹಾರಗಳನ್ನೇ ತೆಗೆದುಕೊಂಡು ಹೋಗಿ.. ಇದರಿಂದಾಗಿ ನಿಮ್ಮ ಆರೋಗ್ಯ ಚೆನ್ನಾಗಿರುವುದಲ್ಲದೆ, ನಿಮ್ಮ ಜೇಬಿಗೆ ಕತ್ತರಿಗೂ ಬೀಳುವುದಿಲ್ಲ..
4. ಪ್ರೋಟೀನ್‌ಗಳನ್ನು ತೆಗೆದುಕೊಳ್ಳಿ;
ಜನರು ವಯಸ್ಸಾದಂತೆ, ಅನೇಕರು ಸಿಹಿತಿಂಡಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಹೆಚ್ಚಿನ ಆಹಾರವನ್ನು ಸೇವಿಸುತ್ತಾರೆ. ಆದರೆ ಸ್ನಾಯು ಕ್ಷೀಣಿಸುವುದನ್ನು ತಡೆಯಲು ಅವರಿಗೆ ಹೆಚ್ಚಿನ ಪ್ರೋಟೀನ್ ಆಹಾರದ ಅಗತ್ಯವಿದೆ. ಹೀಗಾಗಿ ಪ್ರೋಟೀನ್ ಯುಕ್ತ ಆಹಾರಗಳನ್ನು ಹೆಚ್ಚು ಸೇವಿಸುವುದು ಒಳ್ಳೆಯದು..
5. ಸೂಪರ್ ಮಾರ್ಕೆಟ್‌ನಲ್ಲಿ ಸಿಕ್ಕಿದ್ದೆಲ್ಲಾ ತಂದು ತಿನ್ನಬೇಡಿ;
ಇತ್ತೀಚೆಗೆ ಜನರು ಮಾಲ್, ಸೂಪರ್ ಮಾರ್ಕೆಟ್ ಎಂದು ಸುತ್ತಾಡುತ್ತಾರೆ.. ಅಲ್ಲಿ ರಿಯಾಯಿತಿ ಇದೆ ಎಂದು ಸಿಕ್ಕಿದ್ದೆಲ್ಲಾ ಖರೀದಿ ಮಾಡಿ ತರುತ್ತಾರೆ.. ಕಡಿಮೆ ಬೆಲೆಗೆ ಸಿಕ್ತು ಅಂತ ಖರೀದಿ ಮಾಡಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ.. ಹಾಗೆ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಹಾನಿಯಾಗುತ್ತದೆ.. ಹೀಗಾಗಿ, ಆದಷ್ಟು ನೀವು ಕೊಳ್ಳುಬಾಕ ಮನಸ್ಥಿತಿಇಂದ ಹೊರಗೆ ಬನ್ನಿ.. ನಿಮಗೆ ಎಷ್ಟು ಅಗತ್ಯವಿದೆಯೋ ಅಷ್ಟು ವಸ್ತುಗಳನ್ನು ಮಾತ್ರ ಕೊಂಡುತನ್ನಿ.. ಜೊತೆಗೆ ಇಂತಹ ಸ್ಥಳಗಳಿಗೆ ಹೋಗುವಾಗ ಒಂದು ಬಜೆಟ್ ಮಾಡಿಕೊಂಡು ಅಷ್ಟು ಹಣವನ್ನು ಮಾತ್ರ ತೆಗೆದುಕೊಂಡು ಹೋಗಿ.. ಅದಕ್ಕಿಂತ ಹೆಚ್ಚನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬೇಡಿ..
6. ನಿರುತ್ಸಾಹಗೊಳ್ಳಬೇಡಿ
ನೀವು ಸಮತೋಲಿತ ಆಹಾರವನ್ನು ಸೇವಿಸುತ್ತಿದ್ದೀರಿ, ರುಚಿಕರ ಆಹಾರ ಸೇವಿಸುತ್ತಿಲ್ಲ ಎಂದು ದುಃಖಿಸಬೇಡಿ. ಸಂತೋಷದಿಂದ ತಿನ್ನಿರಿ. ನೀವು ನಿಮ್ಮ ಆಹಾರಕ್ರಮಕ್ಕೆ ಒಗ್ಗಿಕೊಳ್ಳುವವರೆಗೆ ಇದು ಸ್ವಲ್ಪ ವಿಚಿತ್ರವಾಗಿ ಅನಿಸಬಹುದು, ಆದರೆ ನಂತರ ಅದು ನಿಮ್ಮ ದೈನಂದಿನ ಜೀವನದ ಭಾಗವಾಗುತ್ತದೆ.
7. ಸಾಕಷ್ಟು ನೀರು ಕುಡಿಯಿರಿ
ತಣ್ಣೀರು ಅಗ್ಗದ ಹಾಗೂ ಅತ್ಯುತ್ತಮ ಆಹಾರ ಆಯ್ಕೆಯಾಗಿದೆ. ಹೀಗಾಗಿ ದಿನವೂ ನೀರು ಹೆಚ್ಚು ಕುಡಿಯುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ..