Politics

ಮತಚಲಾಯಿಸಿದ 57ಮಂದಿ ಅನಕ್ಷರಸ್ಥ ಹಾಗೂ ದಿವ್ಯಾಂಗ ಮತದಾರರು

ಮೈಸೂರು: ಮೈಸೂರು- ಚಾಮರಾಜನಗರ ವಿಧಾನಪರಿಷತ್‌ ದ್ವಿಸದಸ್ಯ ಕ್ಷೇತ್ರದಲ್ಲಿ 57 ಅನಕ್ಷರಸ್ಥ ಹಾಗೂ ದಿವ್ಯಾಂಗ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇವರು ತಮ್ಮ ಚಲಾಯಿಸಲು ಸಹಾಯಕರ ನೆರವನ್ನು ಕೋರಿದ್ದಾರೆಂದು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ. ಇವರಲ್ಲಿ 7 ಮಂದಿ ಮೈಸೂರಿನವರಾಗಿದ್ದು, ಉಳಿದವರು ಚಾಮರಾಜನಗರ ಜಿಲ್ಲೆಗೆ ಸೇರಿದವರೆಂದು ತಿಳಿಸಿದ್ದಾರೆ. ಮತ ಚಲಾಯಿಸಲು ಅರ್ಹರಾಗಿರುವ ಐವತ್ತೇಳು ಸದಸ್ಯರು, ಅನಕ್ಷರಸ್ಥರು ಅಥವಾ ದಿವ್ಯಾಂಗರಾಗಿದ್ದು, ತಮ್ಮ ಪ್ರಾಶಸ್ತ್ಯದ ಮತಗಳನ್ನು ಚಲಾಯಿಸಲು ಸಹಾಯಕರ ನೆರವು ಕೋರಿದ್ರು ಎನ್ನಲಾಗಿದೆ.

Share Post