ಡಿಕೆಶಿ ಜೊತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ; ಸತೀಶ್ ಜಾರಕಿಹೊಳಿ
ಬೆಳಗಾವಿ; ಡಿ.ಕೆ.ಶಿವಕುಮಾರ್ ಜೊತೆ ಹೊಂದಾಣಿಕೆಯಾಗುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರುವ ಅವರು, ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪದ ಬಗ್ಗೆ ಪಕ್ಷದ ಹಂತದಲ್ಲಿ ಚರ್ಚೆಯಾಗಬೇಕು. ನಮ್ಮ ಹಂತದಲ್ಲಿ ಏನೂ ಇಲ್ಲ ಎಂದರು.
ಯಾವುದೇ ಹುದ್ದೆಗಾಗಿ ನಾನು ಬೇಡಿಕೆ ಇಟ್ಟಿಲ್ಲ.ನನ್ನಮನೆಗೆ ಡಿಕೆ ಶಿವಕುಮಾರ್ ಹಲವು ಬಾರಿ ಬಂದಿದ್ದಾರೆ. ಪಕ್ಷದ ವಿಚಾರ ಮತ್ತು ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ಮಾಡಿದ್ದಾರೆ. ಮೈಸೂರಿಗೆ ಹೋಗುವ ಉದ್ದೇಶ ಬೇರೆ, ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಉದ್ದೇಶವೇ ಬೇರೆಬೇರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಅಡ್ಜಸ್ಟ್ಮೆಂಟ್ ಎನ್ನುವ ಪ್ರಶ್ನೆ ಇಲ್ಲ. ಲೋಕಸಭೆ ಚುನಾವಣೆಯಾದ ಬಳಿಕ ಚರ್ಚೆಗೆ ಬರಬಹುದು ಎಂದರು.