Politics

ಗೋವಾದಲ್ಲಿ ಎನ್‌ಸಿಪಿ ಹಾಗೂ ಶಿವಸೇನೆ ಚುನಾವಣಾಪೂರ್ವ ಮೈತ್ರಿ

ಪಣಜಿ: ಗೋವಾದಲ್ಲಿ ಶಿವಸೇನೆ ಹಾಗೂ ಎನ್‌ಸಿಪಿ ಪಕ್ಷಗಳು ರಾಜಕೀಯ ರಣತಂತ್ರ ರೂಪಿಸಿವೆ. ಚುನಾವಣಾ ಪೂರ್ವದಲ್ಲೇ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆಯಲು ಕಸರತ್ತು ಶುರು ಮಾಡಿವೆ. ಆದರೂ ಗೋವಾದಲ್ಲಿ ಈ ಎರಡೂ ಪಕ್ಷಗಳಿಗೆ ಅಷ್ಟೊಂದು ಪ್ರಾಬಲ್ಯ ಇಲ್ಲ ಎಂದು ಹೇಳಲಾಗುತ್ತಿದೆ.

ಇಂದು ಗೋವಾದ ಪಣಜಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಮತ್ತು ಎನ್‌ಸಿಪಿ ಹಿರಿಯ ನಾಯಕ ಪ್ರಫುಲ್ ಪಟೇಲ್, ಮೈತ್ರಿ ವಿಚಾರವನ್ನು ಬಹಿರಂಗ ಮಾಡಿದರು. ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಯನ್ನು ಗೋವಾಗೆ ವಿಸ್ತರಿಸಬೇಕೆಂದು ಬಯಸಿದ್ದೆವು. ಇದಕ್ಕಾಗಿ ಎರಡು ಪಕ್ಷಗಳು ಕಾಂಗ್ರೆಸ್‌ನ್ನು ಸಂಪರ್ಕಿಸಿದ್ದೆವು. ಆದರೆ ಕಾಂಗ್ರೆಸ್‌ ನಾಯಕರು ಯಾವುದೆ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ನಾವು ಮಾತ್ರ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

 

Share Post