ಮೂರು ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ; ಎಲ್ಲೆಲ್ಲಿ ಎಲೆಕ್ಷನ್..?
ಕರ್ನಾಟಕದಲ್ಲಿ ಚುನಾವಣೆಗೆ ಅಖಾಡ ರೆಡಿಯಾಗ್ತಿದೆ.. ಈ ಮಧ್ಯೆ, ಕೇಂದ್ರ ಚುನಾವಣಾ ಆಯೋಗ ಮೂರು ರಾಜ್ಯಗಳಲ್ಲಿ ಎಲೆಕ್ಷನ್ ದಿನಾಂಕ ಘೋಷಣೆ ಮಾಡಿದೆ..ತ್ರಿಪುರದಲ್ಲಿ ಫೆಬ್ರವರಿ 16ರಂದು ಮತದಾನ ನಡೆಯಲಿದೆ.. ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಫೆಬ್ರವರಿ 27ರಂದು ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.. ಈ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 2 ರಂದು ಪ್ರಕಟಿಸಲಾಗುತ್ತದೆ.
ಈಗಾಗಲೇ ತ್ರಿಪುರದಲ್ಲಿ ಬಿಜೆಪಿ ಆಡಳಿತದಲ್ಲಿದೆ.. ನಾಗಾಲ್ಯಾಂಡ್‌ನಲ್ಲಿ ನ್ಯಾಷನಲ್ ಡೆಮೋಕ್ರಟಿಕ್ ಪ್ರೋಗ್ರೆಸ್ ಪಾರ್ಟಿ ಪವರ್‌ನಲ್ಲಿದೆ.. ನ್ಯಾಷನಲ್ ಪಿಪಲ್ ಪಾರ್ಟಿ ಮೇಘಾಲಯದಲ್ಲಿ ಅಧಿಕಾರ ನಡೆಸ್ತಿದೆ.. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರವನ್ನು ತೆಕ್ಕೆಗೆ ತಗೆದುಕೊಳ್ಳುವ ಮೂಲಕ ಬಿಜೆಪಿ ಅಧಿಕಾರಕ್ಕೇರಿತು. ಇದೀಗ, ಮೂರು ವಿಧಾನಸಭೆಗಳ ಅವಧಿಯು ಮಾರ್ಚ್‌ನಲ್ಲಿ ಮುಗಿಯಲಿದೆ. ಪ್ರಸ್ತುತ ನಾಗಾಲ್ಯಾಂಡ್ ವಿಧಾನಸಭೆಯಯ ಐದು ವರ್ಷಗಳ ಅವಧಿಯು ಮಾರ್ಚ್ 12 ರಂದು ಮುಕ್ತಾಯಗೊಂಡರೆ, ಮೇಘಾಲಯ ವಿಧಾನಸಭೆ ಮತ್ತು ತ್ರಿಪುರಾ ವಿಧಾನಸಭೆಯ ಅವಧಿ ಕ್ರಮವಾಗಿ ಮಾರ್ಚ್ 15 ಮತ್ತು ಮಾರ್ಚ್ 22 ರಂದು ಕೊನೆಗೊಳ್ಳಲಿದೆ.
ಚುನಾವಣೆಯೇನೋ ಘೋಷಣೆಯಾಯ್ತು.. ಹಾಗಾದ್ರೆ, ಬಿಜೆಪಿ ತೆಕ್ಕೆಗೆ ಮೂರೂ ರಾಜ್ಯಗಳು ಬರುತ್ವಾ..? ನರೇಂದ್ರ ಮೋದಿ ಅಭಿವೃದ್ಧಿ ಮಂತ್ರ ಏನು..? ಅದು ಹೇಗೆಲ್ಲಾ ಕೆಲ್ಸ ಮಾಡುತ್ತೆ..? ಹೀಗೆ ಸಾಕಷ್ಟು ಪ್ರಶ್ನೆಗಳಿವೆ.. ಈ ಮೂರೂ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಒತ್ತು ಕೊಟ್ಟಿದ್ದಾರೆ.. ಜೊತೆಗೆ, ಈ ರಾಜ್ಯಗಳಲ್ಲಿ ಅಭಿವೃದ್ಧಿ ಪೂರಕ ವಾತಾವರಣ ಸೃಷ್ಠಿಸುವಲ್ಲಿ ಮೋದಿ ಹೆಚ್ಚು ಗಮನ ಹರಿಸಿದ್ದಾರೆ..
ತ್ರಿಪುರಾ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಡಿಜಿಟಲ್, ಮೂಲಸೌಕರ್ಯ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಈ ಮುಂಚೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.. ಇತ್ತೀಚೆಗೆ, ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ರು.. ಈ ಮೂಲಕ ವಸತಿ, ರಸ್ತೆ, ಕೃಷಿ, ದೂರಸಂಪರ್ಕ, ಐಟಿ, ಪ್ರವಾಸೋದ್ಯ ಸೇರಿ ವಿವಿಧ ಕ್ಷೇತ್ರಗಳ ಯೋಜನೆಗೆ ಚಾಲನೆ ನೀಡಿದ್ರು.
ಹೀಗಾಗಿ, 3 ರಾಜ್ಯಗಳಲ್ಲೂ ನೂರಾರು ಲೆಕ್ಕಾಚಾರಗಳನ್ನು ಕೇಂದ್ರ ಬಿಜೆಪಿ ನಾಯಕರು ಮಾಡ್ತಿದ್ದಾರೆ.. 2018ರಲ್ಲಿ 60 ವಿಧಾನಸಭಾ ಸೀಟ್‌ಗಳಿರುವ ತ್ರಿಪುರದಲ್ಲಿ ಬಿಜೆಪಿ 33 ಸೀಟ್‌ಗಳನ್ನುಪಡೆದುಕೊಂಡಿತ್ತು. ಇದೀಗ ಮತ್ತೆ ಕಮಲ್ ಮಾಡಲು ಕಮಲ ಪಡೆ ತಯಾರಿ ನಡೆಸಿದೆ.. ಇನ್ನು ಮೇಘಾಲಯ, ಮತ್ತು ನಾಗಾಲ್ಯಾಂಡ್‌ನಲ್ಲಿ ಮೋದಿ ಮೋಡಿ ಮಾಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.