ತಾಕತ್ ಇದ್ರೆ ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸಲಿ: ಚಾಲೇಂಜ್ ಹಾಕಿದ ಪ್ರಕಾಶ್
ಕೋಲಾರ: ಕೋಲಾರದಿಂದ ಸ್ಪರ್ಧೆ ಘೋಷಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ರಿಗೆ ಸೋಲಿನ ಭೀತಿ ಎದುರಾಗಿದ್ದು, ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದಾರೆಂದು, ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿಕೆ ನೀಡಿದ್ದಾರೆ.
ಕೋಲಾರ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿ ಕರೆದು ಈ ಬಗ್ಗೆ ಮಾತನಾಡಿದ ವರ್ತೂರು, ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ರೆ, ಮೂರನೇ ಸ್ತಾನಕ್ಕೆ ಹೋಗ್ತಾರೆ, ಕ್ಷೇತ್ರ ಘೋಷಣೆಯಿಂದ ಇಲ್ಲಿ ಬೆಂಕಿ ಹೊತ್ತಿ ಉರೀತಿದೆ, ಹಾಗಾಗಿ ಕಣದಿಂದ ಹಿಂದೆ ಸರಿಯಬಾರದು, ಸ್ವಾಭಿಮಾನ, ತಾಕತ್, ಶಕ್ತಿ ಇದ್ದರೆ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ ಎಂದು ಏಕವಚನದಲ್ಲೆ ಸಿದ್ದರಾಮಯ್ಯ ಶಿಷ್ಯ ವರ್ತೂರು ಪ್ರಕಾಶ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ವಿರುದ್ದ ಪ್ರಚಾರಕ್ಕೆ ನನ್ನ ಪರವಾಗಿ 50 ಸಾವಿರ ಜನರ ಬರ್ತಾರೆ, ದಲಿತ ನಾಯಕರು, ಒಕ್ಕಲಿಗ, ಕುರುಬ, ಗೊಲ್ಲ ಸಮುದಾಯದ ನಾಯಕರ್ನ ರಾಜಕೀಯವಾಗಿ ಮುಗಿಸಿದ್ದು ಸಿದ್ದರಾಮಯ್ಯ, ಈ ಸಮುದಾಯದ ಜನರ್ಯಾರು ಅವರಿಗೆ ಮತ ಕೊಡಲ್ಲ ಎಂದರು ಇನ್ನು ಸಿದ್ದು ವಿರುದ್ದ ನಾನು ಚುನಾವಣೆಗೆ ಸ್ಪರ್ಧೆ ಮಾಡೊಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ, ನನ್ನ ಮುಗಿಸಲೆಂದು ನನ್ನ ವಿರುದ್ದ, ಅವರೇ ಕೋಲಾರ ಕ್ಷೇತ್ರವನ್ನ ಆಯ್ಕೆ ಮಾಡಿದ್ದಾರೆ, ಮೂರು ದಿನದಿಂದ ನಂಗೆ ಆನೆ ಬಲ ಬಂದಿದ್ದು, ದಲಿತ ಸಂಘಟನೆಗಳು ಈಗಾಗಲೇ ಸಿದ್ದು ವಿರುದ್ದ ಪ್ರಚಾರ ಆರಂಭಿಸಿದ್ದು, ಸಿದ್ದರಾಮಯ್ಯ ಕೋಲಾರದಲ್ಲಿ ಮೂರನೇ ಸ್ತಾನಕ್ಕೆ ಹೋಗಲಿದ್ದು, ಹೀಗಾಗಿ ಅವರು ಕ್ಷೇತ್ರ ಬದಲಿಸುವ ಮಾಹಿತಿ ಬಂದಿದೆ, ಆದರೆ ಹಾಗೆ ಸಿದ್ದರಾಮಯ್ಯ ಮಾಡಬಾರದು, ನಾನು ಹೈವೋಲ್ಟೇಜ್, ಹಸಿದ ಹೆಬ್ಬುಲಿ, ನನ್ನ ಮುಟ್ಟಿದ್ರೆ ಬರ್ನ್ ಆಗ್ತಾರೆಂದು ವರ್ತೂರು ಎಚ್ಚರಿಕೆ ನೀಡಿದ್ದಾರೆ.