Politics

ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಗೆಲ್ಲೋ ಅವಕಾಶವೇ ಹೆಚ್ಚಿದೆಯಾ..?; ಜನರ ಲೆಕ್ಕಾಚಾರ ಏನು..?

ಹಾಸನ; ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ರಿಲೀಸ್‌ ಆಗಿದ್ದರಿಂದ ಹಾಸನ ರಾಜಕೀಯದ ಬಗ್ಗೆ ಈ ಬಾರಿ ಸಾಕಷ್ಟು ಕುತೂಹಲ ಕೆರಳಿಸಿದೆ.. ಜೆಡಿಎಸ್‌ ಭದ್ರಕೋಟೆಯಾಗಿದ್ದ ಹಾಸನದಲ್ಲಿ ಈ ಬಾರು ಯಾರು ಗೆಲ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.. ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಗೆಲ್ತಾರಾ ಅಥವಾ ಕಾಂಗ್ರೆಸ್‌ನ ಶ್ರೇಯಸ್‌ ಪಟೇಲ್‌ ಗೆಲ್ತಾರಾ..? ಎಂಬುದರ ಬಗ್ಗೆ ಚರ್ಚೆ ನಡೆದಿದೆ.. ಮತದಾನಕ್ಕೂ ಎರಡು ಮೂರು ದಿನದ ಮೊದಲು ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ಗಳನ್ನು ಹಾಸನ ಕ್ಷೇತ್ರದಾದ್ಯಂತ ಹಂಚಲಾಗಿತ್ತು.. ಈ ಕಾರಣದಿಂದಾಗಿ ಪ್ರಜ್ವಲ್‌ ರೇವಣ್ಣಗೆ ಮತಗಳು ಕಡಿಮೆಯಾಗಿರಬಹುದು, ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಕೆಲವರು ಮಾತನಾಡುತ್ತಿದ್ದಾರೆ.. ಆದ್ರೆ ಇದರ ನಡುವೆ, ಇಲ್ಲ ಈ ಬಾರಿಯೂ ಪ್ರಜ್ವಲ್‌ ರೇವಣ್ಣ ಅವರೇ ಗೆಲ್ಲೋದು ಪಕ್ಕಾ.. ಜನರು ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ.. ದೇವೇಗೌಡರ ಕುಟುಂಬಕ್ಕೆ ಬೆಲೆ ಕೊಟ್ಟು ಜನ ಮತ ಹಾಕಿದ್ದಾರೆ.. ಹೀಗಾಗಿ ಪ್ರಜ್ವಲ್‌ ರೇವಣ್ಣ ಅವರೇ ಗೆಲ್ಲೋದು.. ಆದ್ರೆ ಗೆದ್ದ ಮೇಲೆ ಅವರನ್ನು ಸಂಸದರಾಗಿ ಉಳಿಸುತ್ತಾರೋ ಇಲ್ಲವೋ ಅನ್ನೋದೇ ಡೌಟು ಎಂದು ಬಹುತೇಕರು ಹೇಳುತ್ತಿದ್ದಾರೆ..

 ಹಾಗೆ ನೋಡಿದರೆ ಇಬ್ಬರೂ ಘಟಾನುಘಟಿಗಳೇ..!;

ಕಳೆದ ಬಾರಿ ಜೆಡಿಎಸ್‌ ಪಕ್ಷ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿತ್ತು.. ಈ ಬಾರಿ ಬಿಜೆಪಿ ಜೊತೆ ಮತ್ರಿ ಮಾಡಿಕೊಂಡಿದೆ.. ಹಾಸನ ಕ್ಷೇತ್ರ ಜೆಡಿಎಸ್‌ ಪಕ್ಷಕ್ಕೆ ಬಿಟ್ಟುಕೊಡಲಾಗಿತ್ತು.. ಜೆಡಿಎಸ್‌ ಪ್ರಜ್ವಲ್‌ ರೇವಣ್ಣ ಅವರನ್ನೇ ಕಣಕ್ಕಿಳಿಸಿತ್ತು.. ಇದಕ್ಕೆ ಸ್ಥಳೀಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.. ಇದರ ನಡುವೆಯೂ ಪ್ರಜ್ವಲ್‌ ರೇವಣ್ಣ ಅಖಾಡಕ್ಕಿಳಿದಿದ್ದರು.. ಇತ್ತ ಕಾಂಗ್ರೆಸ್‌ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ ಅವರು ಕೂಡಾ ಮಾಜಿ ಸಂಸದ ಪುಟ್ಟಸ್ವಾಮಿ ಗೌಡರ ಮೊಮ್ಮಗ.. ಪುಟ್ಟಸ್ವಾಮಿಗೌಡರು 1989, 1999ರ ಚುನಾವಣೆಯಲ್ಲಿ ದೇವೇಗೌಡರನ್ನೇ ಸೋಲಿಸಿದ್ದಂತಹವರು.. ಇನ್ನು ಅವರ ಮೊಮ್ಮಗ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆ ನರಸೀಪುರ ಕ್ಷೇತ್ರದಲ್ಲಿ ಹೆಚ್‌.ಡಿ.ರೇವಣ್ಣ ವಿರುದ್ಧ ಸ್ಪರ್ಧೆ  ಮಾಡಿದ್ದರು.. ರೇವಣ್ಣ ವಿರುದ್ಧ ಎರಡೂವರೆ ಸಾವಿರ ಮತಗಳ ಅಂತರದಿಂದ ಸೋತಿದ್ದರು.. ಹೀಗಾಗಿ ಈ ಬಾರಿ ಎರಡೂ ಅಭ್ಯರ್ಥಿಗಳೂ ಘಟಾನುಘಟಿಗಳೇ ಆಗಿದ್ದಾರೆ.. ಕಾಂಗ್ರೆಸ್‌ ಅಭ್ಯರ್ಥಿಗೆ ಬಿಜೆಪಿಯಲ್ಲಿನ ಹಲವರು ಸಪೋರ್ಟ್‌ ಮಾಡಿದ್ದಾರೆ ಎಂನ ಮಾತುಗಳೂ ಕೇಳಿಬರುತ್ತಿವೆ..

ಹಾಸನ ಕ್ಷೇತ್ರ ವ್ಯಾಪ್ತಿ ಹೇಗಿದೆ..?;

ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಹಾಸನ, ಬೇಲೂರು, ಅರಸೀಕೆರೆ, ಶ್ರವಣಬೆಳಗೊಳ, ಸಕಲೇಶಪುರ, ಹೊಳೆನರಸೀಪುರ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳು ಸೇರುತ್ತದೆ. ಕಡೂರು, ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.. ಹಾಸನ, ಹೊಳೆನರಸೀಪುರ, ಶ್ರವಣಬೆಳಗೊಳದಲ್ಲಿ ಜೆಡಿಎಸ್‌ ಗೆದ್ದಿದೆ..  ಬೇಲೂರು ಮತ್ತು ಸಕಲೇಶಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ… ಇದರ ಆಧಾರದ ಮೇಲೆ ನೋಡೋದಾದರೆ ಪ್ರಜ್ವಲ್‌ ರೇವಣ್ಣ ಅವರಿಗೇ ಗೆಲುವಿನ ಅವಕಾಶಗಳಿವೆ ಎಂದು ಹೇಳಲಾಗುತ್ತದೆ.. ಆದ್ರೆ ಕೊನೆಯ ಮೂರು ದಿನಗಳಲ್ಲಿ ನಡೆದ ಹೈಡ್ರಾಮಾದಿಂದ ಮತದಾನದ ದಿನ ಏನು ನಡೆದಿದೆಯೋ ಯಾರಿಗೂ ಅರ್ಥವಾಗುತ್ತಿಲ್ಲ..

 

Share Post