ಆರು ಗ್ಯಾರೆಂಟಿಗಳಿಗೆ ಸಹಿ ಹಾಕಿದ ತೆಲಂಗಾಣ ನೂತನ ಸಿಎಂ ರೇವಂತ್ ರೆಡ್ಡಿ
ಬೆಂಗಳೂರು; ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ರೇವಂತ್ ರೆಡ್ಡಿ, ಚುನಾವಣೆ ಸಮುಯದಲ್ಲಿ ನೀಡಿದ್ದ ಆರು ಗ್ಯಾರೆಂಟಿಗಳ ಕಡತಕ್ಕೆ ಸಹಿ ಹಾಕಿದರು. ಅನಂತರ ದಿವ್ಯಾಂಗ ಮಹಿಳೆ ರಜನಿ ಎಂಬಾಕೆಗೆ ಸರ್ಕಾರಿ ಕೆಲಸ ನೀಡುವ ಕಡತಕ್ಕೆ ಸಹಿ ಹಾಕಿದರು. ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ಕೃತಜ್ಞತಾ ಸಮಾವೇಶ ನಡೆಯುತ್ತಿದ್ದು, ಲಕ್ಷಾಂತರ ಜನ ಭಾಗಿಯಾಗಿದ್ದಾರೆ. ಈ ಸಮಾವೇಶದಲ್ಲೇ ರೇವಂತ್ ರೆಡ್ಡಿ, ಆರು ಗ್ಯಾರೆಂಟಿಗಳ ಜಾರಿಗೆ ತಮ್ಮ ಮೊದಲ ಸಹಿ ಹಾಕಿದರು. ಈ ಮೂಲಕ ಜನರಲ್ಲಿ ಭರವಸೆ ಮೂಡಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ರೇವಂತ್ ರೆಡ್ಡಿ ತೆಲಂಗಾಣದ ನಾಲ್ಕು ಕೋಟಿ ಜನರಿಗೆ ವಿಶೇಷವಾಗಿ ರೈತರು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳಿಗೆ ನ್ಯಾಯ ಸಿಗಲಿದೆ. ಪ್ರಗತಿ ಭವನದ ಬೇಲಿ ಒಡೆದಿದ್ದು, ಜನ ಮುಕ್ತವಾಗಿ ಬರಬಹುದು ಎಂದು ಸ್ಪಷ್ಟಪಡಿಸಿದರು. ಶುಕ್ರವಾರ ಜ್ಯೋತಿರಾವ್ ಫುಲೆ ಪ್ರಜಾಭವನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ತಿಳಿಸಿದರು. ನಾವು ಸೇವೆ ಮಾಡಲು ಬಂದಿದ್ದೇವೆ ಎಂದು ಭರವಸೆ ನೀಡಿದರು