National

ಜೆಲ್ಲಿಕಟ್ಟು ಅವಾಂತರ: ಒಡೆಯನನ್ನೇ ಕೊಂದ ಎತ್ತು

ತಮಿಳುನಾಡು: ಸಂಕ್ರಾಂತಿ ಹಬ್ಬ ಅಂದ್ರೆನೇ ಸುಗ್ಗಿ, ರೈತರ ಹಬ್ಬ, ಇಡೀ ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸುವ ಈ ಹಬ್ಬದಲ್ಲಿ ವಿಶೇಷ ಅಂದ್ರೆ ಹಸು, ಎತ್ತು, ಹೋರಿಗಳ ಶೃಂಗಾರ ಮತ್ತು ಅವುಗಳ ಪೈಪೋಟಿ, ಮತ್ತು ಕೋಳಿ ಪಂದ್ಯಕ್ಕೆ ಹೆಸರುವಾಸಿಯಾಗಿದೆ. ತಮಿಳುನಾಡಿನ ಜೆಲ್ಲಿಕಟ್ಟು ಬಹಳ ಫೇಮಸ್‌ ಹಾಗೆ ಈ ಹಬ್ಬದಲ್ಲಿ ಯಾವುದಾದರೂ ಒಂದು ಮನೆಯಲ್ಲಿ ಸೂತಕದ ಛಾಯೆ ಕೂಡ ಆವರಿಸುತ್ತದೆ. ಯಾಕಂದ್ರೆ ಈ ಜೆಲ್ಲಿಕಟ್ಟಿನಲ್ಲಿ ಪ್ರತಿವರ್ಷ ಕನಿಷ್ಟ ಒಬ್ಬರಅದರೂ ಸಾವನ್ನಪ್ಪುತ್ತಾರೆ. ಅದರಂತೆ ಈ ವರ್ಷವೂ ಕೂಡ ತಾನು ಸಾಕಿ ಬೆಳೆಸಿದ್ದ ಒಡೆಯನಿಗೇ ಎತ್ತು ತಿವಿದಿದೆ.

ಕೊರೊನಾ ನಡುವೆಯೂ ಜೆಲ್ಲಿಕಟ್ಟು ಆಟ ನಡೆಸಿದ್ದಾರೆ. ಇದಕ್ಕೆ ಹಲವಾರು ನಿಬಂಧನೆಗಳನ್ನು ತಮಿಳುನಾಡು ಸರ್ಕಾರ ವಿಧಿಸಿದ್ರೂ ಎಲ್ಲವನ್ನು ಗಾಳಿಗೆ ತೂರಿ ದಂಡು ದಂಡಾಗಿ ಜೆಲ್ಲಿಕಟ್ಟು ವೀಕ್ಷಣೆಗೆ ಜನ ಸೇರಿದ್ರು. ಚನ್ನಾಗಿ ಕೊಬ್ಬಿದ ಮೈ ಬೆಳೆಸಿಕೊಂಡು ಮುನ್ನುಗ್ಗುತ್ತಿರುವ ಹೋರಿಗಳನ್ನು ಪಳಗಿಸುವುದೇ ಒಂದು ಸಾಹಸ. ಇಂತ ಸಾಹಸ ಆಟದಲ್ಲಿ ಭಾಗಿಯಾಗುವ ಮೊದಲು ಎತ್ತುಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ತದನಂತರ ಜೆಲ್ಲಿಕಟ್ಟು ಸ್ಥಳಕ್ಕೆ ಕರೆದೊಯ್ಯುತ್ತಾರೆ. ಈ ವೇಳೆ ಒಂದು ಎತ್ತು ರೊಚ್ಚಿಗೆದ್ದು ತಾನು ಸಾಕಿ ಬೆಳೆಸಿದ ಒಡೆಯನ ತೊಡೆಗೆ ಕೊಂಬಿನಿಂದ ತಿವಿದಿದೆ. ಬಲವಾಗಿ ತಿವಿದ ಕಾರಣ ಮೀನಾಕ್ಷಿ ಸುಂದರಂಗೆ ತೀವ್ರ ರಕ್ತಸ್ರಾವವಾಗಿದೆ ಕೂಡಲೇ ಸುಂದರಂ ಅವರನ್ನು ಮಹಾತ್ಮಗಾಂಧಿ ಮೆಮೋರಿಯಲ್‌ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ರು, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾರೆ. ಹಬ್ಬದ ವಾತಾವರಣವಿದ್ದ ಮನೆಯಲ್ಲಿ ಈಗ ಶೋಕ ಮಡುಗಟ್ಟಿದೆ.

Share Post