Politics

ನಮಗೆ ಸಚಿವರಾಗಲು ಯೋಗ್ಯತೆ ಇಲ್ಲವಾ..?; ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪ್ರಶ್ನೆ

ದಾವಣಗೆರೆ: ನಮಗೆ ಸಚಿವರಾಗಲು ಯೋಗ್ಯತೆ ಇಲ್ಲವಾ..? ಪ್ರತಿ ಬಾರಿ ಅಧಿಕಾರ ಅನುಭವಿಸಿದವರೇ ಸಚಿವರಾಗಬೇಕಾ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ನಾನು ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸಾಕಷ್ಟು ಶ್ರಮಿಸಿದ್ದೇವೆ. ಜೊತೆಗೆ ನಾವೂ ಕೂಡಾ ಹಿರಿಯ ಶಾಸಕರಿದ್ದೇನೆ. ಆದ್ರೆ, ನಮಗೆ ಸಚಿವ ಸ್ಥಾನ ನೀಡುತ್ತಿಲ್ಲ ಯಾಕೆ..? ನಾವು ಅದಕ್ಕೆ ಅರ್ಹರಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈಗಿನ ಸಚಿವರು ನಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ನಾವು ಪತ್ರ ಕೊಟ್ಟರೆ ಸಚಿವರು ಉತ್ತರ ನೀಡಬೇಕು. ಆದ್ರೆ ನಮ್ಮ ಮನವಿಗೆ ಅವರ ಪಿಎಗಳು ಷರಾ ಬರೆಯುತ್ತಿದ್ದಾರೆ. ಸಚಿವರಿಗೆ ಶಾಸಕರಾಗಿ ನಾವು ಕರೆ ಮಾಡಿದರೆ ಯಾರೂ ಸ್ವೀಕರಿಸುವುದೇ ಇಲ್ಲ. ಹೀಗಿದ್ದಾಗ ಅಭಿವೃದ್ಧಿ ಹೇಗೆ ಸಾಧ್ಯ..? ನಮ್ಮ ಕ್ಷೇತ್ರಗಳ ಕೆಲಸಗಳನ್ನು ಯಾರ ಬಳಿ ಮಾಡಿಸಬೇಕು ಎಂದು ಪ್ರಶ್ನೆ ಮಾಡಿದರು.

Share Post