NationalPolitics

ಗುಜರಾತ್ ನಲ್ಲಿ‌ ಮೋದಿ ಹವಾ; 40 ಪ್ರಚಾರ ಸಭೆ ನಡೆಸ್ತಾರೆ ಪ್ರಧಾನಿ

ಗಾಂಧಿನಗರ; ಗುಜರಾತ್ ವಿಧಾನಸಭಾ ಚುನಾವಣೆ ಕಾವು ಜೋರಾಗುತ್ತಿದೆ. ಎಲ್ಲಾ ಪಕ್ಷಗಳೂ ಪ್ರಚಾರದ ಭರಾಟೆ ಶುರುವಾಗಿದೆ.

ಇತ್ತ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಭಾರೀ ಸಭೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. 15 ದಿನಗಳಲ್ಲಿ ಒಟ್ಟು 40 ಬೃಹತ್ ಸಮಾವೇಶಗಳನ್ನು ನಡೆಸಲು ಮೋದಿ ನಿರ್ಧಾರ ಮಾಡಿದ್ದಾರೆ.

ನವೆಂಬರ್ 15 ರಿಂದ ಪ್ರಧಾನಿ ಮೋದಿ ಗುಜರಾತ್ ನಲ್ಲಿ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ. ಈಗಾಗಲೇ ಬಹುತೇಕ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. 22 ಕ್ಷೇತ್ರಗಳಿಗಷ್ಟೇ ಟಿಕೆಟ್ ಘೋಷಣೆಯಾಗಬೇಕಿದೆ.

Share Post