Politics

ದೆಹಲಿಯಿಂದ ಬುಲಾವ್‌; ಅಮಿತ್‌ ಶಾ ಭೇಟಿಯಾಗಿ ಜನಾರ್ದನರೆಡ್ಡಿ ಮಹತ್ವದ ಮಾತುಕತೆ!

ಬೆಂಗಳೂರು; ಜನಾರ್ದನರೆಡ್ಡಿ.. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿ ವಾಪಸ್‌ ಬಂದ ಮೇಲೆ ಬಿಜೆಪಿ ಇವರನ್ನು ದೂರವೇ ಇಟ್ಟಿತ್ತು.. ಹಲವರು ಬಾರಿ ಪ್ರಯತ್ನ ಪಟ್ಟರೂ ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ.. ಇದಾದ ಮೇಲೆ ವಿಧಿಯಿಲ್ಲದೇ ಜನಾರ್ದನರೆಡ್ಡಿ ಸ್ವಂತ ಪಾರ್ಟಿ ಕಟ್ಟಿದ್ದಾರೆ.. ಕಲ್ಯಾಣ ರಾಜ್ಯಪ್ರಗತಿ ಪಕ್ಷ ಅಂತ ಅದರ ಹೆಸರು.. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಜನಾರ್ದನರೆಡ್ಡಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು.. ಆದ್ರೆ ಗೆದ್ದಿದ್ದು ಮಾತ್ರ ಅವರೊಬ್ಬರೇ…

ಪಕ್ಷಕ್ಕೆ ಕರೆಯದಿದ್ದ ಬಿಜೆಪಿ ನಾಯಕರು;

ವಿಧಾನಸಭಾ ಚುನಾವಣೆಯಲ್ಲಿ ಒಬ್ಬರೇ ಗೆದ್ದು ಜನಾರ್ದನರೆಡ್ಡಿ ವಿಧಾನಸೌಧ ಪ್ರವೇಶ ಮಾಡಿದರು.. ಆದ್ರೆ ಅವರು ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದ ಕಾರಣಕ್ಕೆ ನಾಲ್ಕಾರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತುಸುಣ್ಣವಾದರು.. ಆದರೂ ಕೂಡಾ ಜನಾರ್ದನರೆಡ್ಡಿಯನ್ನು ಬಿಜೆಪಿ ನಾಯಕರು ಪಕ್ಷಕ್ಕೆ ಕರೆಯಲಿಲ್ಲ… ಆದ್ರೆ ಈಗ ಲೋಕಸಭಾ ಚುನಾವಣೆ ಹತ್ತಿರಕ್ಕೆ ಬಂದಿದೆ.. ಈಗ ಕೊನೆಗೂ ಬಿಜೆಪಿ ಹೈಕಮಾಂಡ್‌ಗೆ ಜನಾರ್ದನರೆಡ್ಡಿಯ ಅನಿವಾರ್ಯತೆ ಬಂದಿದ್ದೆ.. ಹೀಗಾಗಿ ಖುದ್ದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಜನಾರ್ದನರೆಡ್ಡಿಯವರನ್ನು ದೆಹಲಿಗೆ ಕರೆಸಿಕೊಂಡು ಮಾತನಾಡಿದ್ದಾರೆ.

ಅರ್ಧ ಗಂಟೆಗೂ ಹೆಚ್ಚು ಕಾಲ ಮಾತು;

ಜನಾರ್ದನರೆಡ್ಡಿ ಬೆಂಬಲ ಇಲ್ಲದಿದ್ದರಿಂದ ಶ್ರೀರಾಮುಲು, ಸೋಮಶೇಖರರೆಡ್ಡಿ ಮುಂತಾದವರು ವಿಧಾನಸಭಾ ಚುನಾವಣೆಯಲ್ಲಿ ಸೋತರು.. ಈಗ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಶ್ರೀರಾಮುಲು ಅವರೇ ಬಿಜೆಪಿ ಅಭ್ಯರ್ಥಿ. ಬಳ್ಳಾರಿ, ಕೊಪ್ಪಳ ಮುಂತಾದ ಕಡೆ ಈಗಲೂ ಜನಾರ್ದನರೆಡ್ಡಿ ಮಾತು ನಡೆಯುತ್ತೆ.. ಅವರು ಮನಸು ಮಾತು ಸ್ವಲ್ಪ ಮತಗಳನ್ನು ಉಲ್ಟಾ ಮಾಡಿದರೂ ಅದು ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ.. ಹಾಗೆ ಆದ್ರೆ, ವಿಧಾನಸಭಾ ಚುನಾವಣೆಯಲ್ಲಿ ಆದಂತೆ ಒಂದೆರಡು ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಿಬಿಡುತ್ತವೆ.. ಇದನ್ನು ಅರಿತೋ ಏನೋ ಅಮಿತ್‌ ಶಾ ಅವರು ಜನಾರ್ದನರೆಡ್ಡಿ ದೆಹಲಿಗೆ ಕರೆಸಿಕೊಂಡು ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ;

ರಾಜ್ಯಸಭಾ ಚುನಾವಣೆಯಲ್ಲಿ ಜನಾರ್ದನರೆಡ್ಡಿಯವರು ಕಾಂಗ್ರೆಸ್‌ಗೆ ಮತ ಹಾಕಿದ್ದರು.. ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಏನೇ ಕಾರ್ಯಾಚರಣೆ ನಡೆಸಿದರೂ ಜನಾರ್ದನರೆಡ್ಡಿ ಕಾಂಗ್ರೆಸ್‌ ಪರ ನಿಂತರು.. ಲೋಕಸಣಾ ಚುನಾವಣೆಯಲ್ಲೂ ಹಾಗೇ ಮಾಡಿದರೆ ಕಷ್ಟ ಎಂದು ಬಿಜೆಪಿ ನಾಯಕರಿಗೆ ಅರ್ಥವಾಗಿದೆ.. ಹೀಗಾಗಿ ದೆಹಲಿಗೆ ಕರೆಸಿಕೊಂಡು ಮಾತನಾಡಿದ್ದಾರೆ. ಕೆಆರ್‌ಪಿಪಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡುವ ಕುರಿತೂ ಮಾತುಕತೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

 

Share Post