Politics

ರಾಜ್ಯ ಸಂಪುಟ ವಿಸ್ತರಣೆಗೆ ಹೆಚ್ಚಿದ ಒತ್ತಡ; ಶಾಸಕರ ಬಹಿರಂಗ ಆಗ್ರಹ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮತ್ತೆ ಸಚಿವ ಗಿರಿಗಾಗಿ ಸಮರ ಶುರುವಾಗಿದೆ. ರಾಜ್ಯ ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇದ್ದು, ಅವುಗಳನ್ನು ತುಂಬಿರಿ, ಇಲ್ಲವೇ ಸಂಪುಟ ಪುನಾರಚನೆ ಮಾಡಿ ಎಂಬ ಕೂಗು ಜೋರಾಗುತ್ತಿದೆ. ಹಲವು ಬಿಜೆಪಿ ಶಾಸಕರು ಈಗಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ಒತ್ತಡ ಹಾಕಲು ಶುರು ಮಾಡಿದ್ದಾರೆ. ನಮಗೂ ಸಚಿವ ಸ್ಥಾನ ನಿಭಾಯಿಸುವ ಅರ್ಹತೆ ಇದೆ. ಹೀಗಾಗಿ ನಮಗೂ ಸಚಿವಗಿರಿ ನೀಡಿ ಎಂದು ಕೆಲ ಶಾಸಕರು ಸಿಎಂಗೆ ಒತ್ತಡ ಹೇರುತ್ತಿದ್ದಾರೆ.

ಸಚಿವಾಕಾಂಕ್ಷಿ ಶಾಸಕರು ಈಗಾಲೇ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ರೇಣುಚಾರ್ಯ, ಅಭಯ್‌ ಪಾಟೀಲ್‌, ತಿಪ್ಪಾರೆಡ್ಡಿ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಶುರು ಮಾಡಿದ್ದಾರೆ. ಬಹಿರಂಗವಾಗಿಯೇ ಈ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ತಲೆನೋವು ಶುರುವಾಗಿದೆ.

Share Post