Politics

ರೇವಣ್ಣ 30 ವರ್ಷದ ಹಿಂದೆ ಇಂಗ್ಲೆಂಡ್ ನಲ್ಲಿ ಇದೇ ತರಾ ತಗ್ಲಾಕ್ಕೊಂಡಿದ್ರಂತೆ!

 

ಮಂಡ್ಯ;  ಹಾಸನ ಅಶ್ಲೀಲ ವಿಡಿಯೋ ಪ್ರಕರಣ ದೊಡ್ಡ ಸದ್ದು ಮಾಡುತ್ತಿದೆ.. ದೇಶದೆಲ್ಲೆಡೆ ಇದೇ ವಿಚಾರ ಚರ್ಚೆಯಾಗುತ್ತಿದೆ.. ಹೀಗಿರುವಾಗಲೇ ಮಾಜಿ ಸಂಸದ ಶಿವರಾಮೇಗೌಡ ಮತ್ತೊಂದು ಬಾಂಬ್ ಸಿಡಿಸಿದ್ದಾರೆ..

  ಮಾಜಿ ಸಚಿವ ರೇವಣ್ಣ ಅವರಿಗೆ ಇದೇನೂ ಹೊಸದಲ್ಲ.. ಇಂಗ್ಲೆಂಡ್ ನಲ್ಲಿ‌ 30 ವರ್ಷದ ಹಿಂದೆ ಇದೇ ರೀತಿಯ ವರ್ತನೆ ತೋರಿ ತಗಲಾಕ್ಕೊಂಡಿದ್ದರು..ಹಾಸನದಲ್ಲಿ ನಡೆದಂತಹ ಘಟನೆಯೇ ಇಂಗ್ಲೆಂಡ್ ನಲ್ಲೂ ನಡೆದಿತ್ತು ಎಂದು ಶಿವರಾಮೇಗೌಡ ಆರೋಪ ಮಾಡಿದ್ದಾರೆ.

   30 ವರ್ಷದ ಹಿಂದೆ ನನ್ನ ಹಾಗೂ ರೇವಣ್ಣ ಕುಟಂಬಗಳು ಇಂಗ್ಲೆಂಡ್ ಪ್ರವಾಸ ಹೋಗಿದ್ದೆವು.. ಆ ವೇಳೆ ಈ ಘಟನೆ ನಡೆದಿತ್ತು. ಬೇಕಾದರೆ ಎಸ್ ಐಟಿ ಅಧಿಕಾರಿಗಳು ಇಂಗ್ಲೆಂಡ್ ಹೋಗಿ ಪರಿಶೀಲಿಸಲಿ. ಅಲ್ಲಿನ ರೆಕಾರ್ಡ್ ಗಳಲ್ಲಿ ಮಾಹಿತಿ ಸಿಗುತ್ತದೆ ಎಂದು ಶಿವರಾಮೇಗೌಡ ಹೇಳಿದ್ದಾರೆ.

 

Share Post