ನಕಲಿ ಚಿನ್ನ ಕೊಟ್ಟು ವಂಚನೆ; ಆರೋಪಿಗಳಿಗಾಗಿ ಹುಡುಕಾಟ
ಬೆಂಗಳೂರು; ನಕಲಿ ಆಭರಣ ಕೊಟ್ಟು ಅಸಲಿ ಆಭರಣ ದೋಚಿ ಎಸ್ಕೇಪ್ ಆದ ಅಜ್ಜಿ ಟೀಂಗಾಗಿ ಬೆಂಗಳೂರು ಅಮೃತಹಳ್ಳಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ. ಮಗಳ ಮದುವೆಗೆ ಆಭರಣ ತಗೋಳೋ ನೆಪದಲ್ಲಿ ಬಂದು ಚಿನ್ನ ದೋಚಿ ಎಸ್ಕೇಪ್ ಆಗಿರುವ ಗ್ಯಾಂಗಾಗಿ ಪೋಲೀಸರು ಹುಡುಕಾಡುತಿದ್ದಾರೆ.
ಅಜ್ಜಿ ಜೊತೆ ರಾಹುಲ್ ಎಂಬಾತ ಅಮೃತಹಳ್ಳಿಯ ಧನಲಕ್ಷ್ಮಿ ಜ್ಯೂವಲರ್ಸ್ ಗೆ ಭೇಟಿ ನೀಡಿದ್ದಾರೆ. ತಾವು ನಾಗವಾರದ ನಿವಾಸಿ ಎಂದು ಹೇಳಕೊಂಡಿದ್ದಾರೆ. ರಾಹುಲ್ ಎಂಬಾತ ನನ್ನ ಮಗಳ ಮದ್ವೆ ಇದೆ. ನನ್ನ ತಾಯಿ ಹಳೆ ಆಭರಣ ಕೊಟ್ಟು ಹೊಸ ಒಡವೆ ಖರೀದಿ ಮಾಡ್ಬೇಕು ಅಂದಿದ್ದಾನೆ. ನಂತ್ರ ಅಜ್ಜಿ ಬ್ಯಾಗಿಂದ 240 ಗ್ರಾಂ ತೂಕದ ಗುಂಡಿನ ಸರ ತೆಗೆದಿದ್ದಾರೆ. ಅದನ್ನ ಚೆಕ್ ಮಾಡಿದಾಗ ಅಸಲಿ ಚಿನ್ನ ಅನ್ನೋದು ತಿಳಿದು ಬಂದಿದೆ. 10 ಲಕ್ಷ ಮೌಲ್ಯದ ಚಿನ್ನಾಭರಣ ಬೇಕು. ನಾವು ನಾಳೆ ಬಂದು ಚಿನ್ನ ಖರೀದಿ ಮಾಡ್ತೀವಿ ಅಂತ ಅಲ್ಲಿಂದ ಹೊರಟಿದ್ದಾರೆ.
ಮರುದಿನ ನಕಲಿ ಗುಂಡಿನ ಸರ ತಗೊಂಡು ಬಂದು ಮಾಲೀಕನಿಗೆ ನೀಡಿದ್ದಾರೆ. ನಿನ್ನೆ ಚೆಕ್ ಮಾಡಿದ ಸರವೇ ಅಲ್ವಾ ಅಂತ ಮರು ಪರೀಶಿಲನೆ ಮಾಡದೆ ಮಾಲೀಕ ಮೋಸ ಹೋಗಿದ್ದಾನೆ. ಆ ನಕಲಿ ಚಿನ್ನವನ್ನ ನೀಡಿ 10 ಲಕ್ಷ ಮೌಲ್ಯದ 168 ಗ್ರಾಂ ತೂಕದ ಅಸಲಿ ಆಭರಣ ಖರೀದಿಸಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಇದಾದ ಬಳಿಕ ಅಂಗಡಿ ಮಾಲೀಕ ಚಿಕ್ಕಪೇಟೆಗೆ ಸರ ಮಾರಾಟಕ್ಕೆ ಬಂದಾಗ ನಕಲಿ ಅನ್ನೋದು ಗೊತ್ತಾಗಿದೆ.
ತಕ್ಷಣವೇ ಅಮೃತಹಳ್ಳಿ ಪೊಲೀಸ್ ಠಾಣೆಗೆ ಬಂದು ಜ್ಯುವೆಲರ್ಸ್ ಮಾಲೀಕ ಓಂ ಪ್ರಕಾಶ್ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪೋಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.