ಸರಸಕ್ಕೆ ಬಾರದ ಪತ್ನಿಯನ್ನು ಕೊಚ್ಚಿಕೊಂದ ಕಲಬುರಗಿಯ ಗಂಡ!
ಕಲಬುರಗಿ; ರಾತ್ರಿ ಸರಸವಾಡೋದಕ್ಕೆ ನಿರಾಕರಣೆ ಮಾಡಿದ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.. ಕಂಠಪೂರ್ತಿ ಕುಡಿದುಬಂದಿದ್ದ ಪತಿ ತನ್ನ ಪತ್ನಿಯನ್ನು ಸರಸಕ್ಕೆ ಕರೆದಿದ್ದಾನೆ.. ಇದನ್ನು ನಿರಾಕರಿಸಿದ್ದಕ್ಕೆ ಮಾರಕಾಸ್ತ್ರದಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಬಟಗೇರಾ(ಬಿ) ಗ್ರಾಮದಲ್ಲಿ ಈ ಘಟನೆ ನಡೆದಿದೆ..
42 ವರ್ಷದ ನಾಗಮ್ಮ ಎಂಬಾಕೆಯೇ ಗಂಡನಿಂದ ಕೊಲೆಯಾದ ಮಹಿಳೆಯಾಗಿದ್ದಾಳೆ.. ಪತಿ ಶೇಖಪ್ಪ ಕೂಲಿ ಕೆಲಸ ಮಾಡುವವನಾಗಿದ್ದು, ಪ್ರತಿ ದಿನ ಕುಡಿದು ಬಂದು ಜಗಳ ಮಾಡುತ್ತಿದ್ದ.. ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತ್ನಿಯನ್ನು ದೂರುತ್ತಿದ್ದ.. ಇದರಿಂದ ಬೇಸತ್ತ ಪತ್ನಿ ಮಕ್ಕಳೊಂದಿಗೆ ಊರ ಹೊರಗಿನ ಒಂದು ಮನೆಯಲ್ಲಿ ವಾಸವಿದ್ದಳು.. ನಂತರ ಸಂಬಂಧಿಕರು ಸಂಧಾನ ಮಾಡಿ ನಾಗಮ್ಮಳನ್ನು ಶನಿವಾರವಷ್ಟೇ ಗಂಡನ ಮನೆಗೆ ಕಳುಹಿಸಿದ್ದರು.. ಆದ್ರೆ ನಂತರವೂ ಕುಡಿದು ಬಂದ ಗಂಡ ಗಲಾಟೆ ಮಾಡಿದ್ದಾನೆ..
ಇನ್ನು ಇದೇ ವೇಳೆ ಪತ್ನಿಯನ್ನು ಸರಸಕ್ಕೆ ಕರೆದಿದ್ದು, ಪತ್ನಿ ಅದಕ್ಕೆ ನಿರಾಕರಣೆ ಮಾಡಿದ್ದಾಳೆ.. ಇದರಿಂದ ರೊಚ್ಚಿಗೆದ್ದ ಶೇಖಪ್ಪ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.. ನಂತರ ತಾನೇ ಬಂದು ಠಾಣೆಗೆ ಶರಣಾಗಿದ್ದಾನೆ..