ಅಧಿವೇಶನದಲ್ಲಿ ಸಿದ್ದು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಚ್ಚಿಡ್ತೀನಿ : HDK ಹೊಸ ಬಾಂಬ್
ಬೆಂಗಳೂರು : ಜಂಟಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ದಾಖಲೆ ಒಂದನ್ನು ಬಿಡುಗಡೆ ಮಾಡ್ತೀನಿ ಎಂದು ಕುಮಾರಸ್ವಾಮಿಯವರು ಬಾಂಬ್ ಸಿಡಿಸಿದ್ದಾರೆ.
ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಇತ್ತೀಚೆಗೆ ನಾನು ಸದನದಲ್ಲಿ ಭಾಗಿಯಾಗಿರಲಿಲ್ಲ ಕಾಂಗ್ರೆಸ್‍ಗೆ ಸದನ ಹೈಜಾಕ್ ಮಾಡಲು ಬಿಟ್ಡಿದ್ದೇವು. ಆದ್ರೆ ಈ ಬಾರಿ ಹಾಗೆ ಆಗೊಲ್ಲ. ಈ ಬಾರಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡ್ತೀನಿ.
ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ ಆದ್ರೆ ಅವರ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡುತ್ತಿಲ್ಲ. ಅವರ ಅವಧಿಯಲ್ಲಿ ನಡೆದಿರುವ ಹಣದ ಲೂಟಿ ಬಗ್ಗೆ ನಾನು ದಾಖಲೆ ಬಿಚ್ಚಿಡ್ತೀನಿ, ಇದಕ್ಕೆ ಆಡಳಿತ ಪಕ್ಷ ಹಾಗೂ ವಿಪಕ್ಷ ಉತ್ತರ ಕೊಡಬೇಕು ಎಂದು ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಇನ್ನು ಹಿಜಾಬ್ ಗಲಾಟೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಹಾಳು ಮಾಡ್ತಿದ್ದಾರೆ. ಪೋಷಕರು ಮಕ್ಕಳಿಗೆ ತಿಳುವಳಿಕೆ ಹೇಳಿಕೊಡಬೇಕು. ಸಮಾಜ ಹಾಳು ಮಾಡುವ ಕೆಲಸ ಯಾರು ಮಾಡಬಾರದು. ಇದು ಹೇಗೆಲ್ಲಾ ತಿರುವು ಪಡೆಯುತ್ತೆ ನೋಡೋಣ ಎಂದು ಹೇಳಿದ್ದಾರೆ.