ಮುಂದೊಂದು ದಿನ ಹಿಜಾಬ್ ಧರಿಸಿದ ಹೆಣ್ಣುಮಗಳು ಈ ದೇಶದ ಪ್ರಧಾನಿಯಾಗ್ತಾಳೆ-OYC
ದೆಹಲಿ: ಕರ್ನಾಟಕದಲ್ಲಿ ಶುರುವಾದ ಹಿಜಾಬ್ ವಿವಾದ ಸುಂಟರಗಾಳಿಯಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ನಾಯಕರು ಕೂಡ ಭಾರತದ ಹಿಜಾಬ್ ವಿವಾದದ ಬಗ್ಗೆ ಮಾತನಾಡುತ್ತಿದ್ದಾರೆ. ʻನಾನು ಟೋಪಿ ಹಾಕಿಕೊಂಡು ಸಂಸತ್ತಿಗೆ ಹೋಗುವುದಾದರೆ, ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಹೋಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದ ಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಮತ್ತೊಂದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. “ಇಂದು ಹಿಜಾಬ್ ಧರಿಸಿದ ಹುಡುಗಿ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾಳೆ.” ಎಂದು ಭವಿಷ್ಯ ನುಡಿದಿದ್ದಾರೆ.
ಹಿಜಾಬ್ ವಿವಾದವನ್ನು ಟೀಕಿಸಿದ ಪಾಕ್ ಮಂತ್ರಿಗಳಿಗೆ ಓವೈಸಿ ಸ್ಟ್ರಾಂಗ್ ಕೌಂಟರ್ ನೀಡಿದ್ದಾರೆ. ಇದು ನಮ್ಮ ದೇಶದ ಆಂತರಿಕ ವಿಚಾರ ಇದನ್ನು ನಾವೆ ಪರಿಹರಿಸಿಕೊಳ್ಳುತ್ತೇವೆ. ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ನಿಮ್ಮಂದ ನಾವು ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದ್ರು. ಹಾಗೆ ಮಾತನಾಡುತ್ತಾ “ಹಿಜಾಬ್ ಧರಿಸಿದ ಮಹಿಳೆ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾಳೆ” ಎಂದು ಪಾಕಿಸ್ತಾನಕ್ಕೆ ಪ್ರಬಲ ಕೌಂಟರ್ ನೀಡಿದ್ದಾರೆ.
“ಹಿಜಾಬ್ ಮತ್ತು ಬುರ್ಖಾ ಧರಿಸಿದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಾರೆ. ಜಿಲ್ಲಾಧಿಕಾರಿಗಳಾಗುತ್ತಾರೆ. ನ್ಯಾಯಾಧೀಶರಾಗಿ, ವೈದ್ಯರು ಮತ್ತು ಉದ್ಯಮಿಗಳಾಗಿ ಮಿಂಚಿದ್ದಾರೆ. ದೊಡ್ಡ ಮಟ್ಟದಲ್ಲಿ ಕೆಲಸಗಳನ್ನು ಗಿಟ್ಟಿಸಿಕೊಳ್ತಾರೆ. ಹಾಗೆಯೇ “ಹಿಜಾಬ್ ಧರಿಸಿದ ಮಹಿಳೆ ಮುಂದೊಂದು ದಿನ ಈ ದೇಶದ ಪ್ರಧಾನಿಯಾಗುತ್ತಾಳೆ..ನಾನು ಹೇಳಿದ್ದನ್ನು ನೀವು ಬರೆದಿಟ್ಟುಕೊಳ್ಳಿ, ನೋಡಲು ನಾನು ಬದುಕದೇ ಇರಬಹುದು ಆದರೆ ಇತಿಹಾಸದ ಪುಟಗಳಲ್ಲಿ ಇರಲಿ ಎಂದಿದ್ದಾರೆ. ಬಯಸಿದರೆ. ಇದನ್ನು ನೋಡಲು ನಾನು ಬದುಕದೇ ಇರಬಹುದು. ಆದರೆ ಮುಂದೊಂದು ದಿನ ಅದು ಖಂಡಿತಾ ಆಗುತ್ತೆ. ಹಿಜಾಬ್ ಧರಿಸುತ್ತೇವೆಂದು ತಮ್ಮ ಮಕ್ಕಳ ವಿನಂತಿಯನ್ನು ಪೋಷಕರು ಬೆಂಬಲಿಸಬೇಕು. ಹಿಜಾಬ್ ಧರಿಸಲು ಪೋಷಕರು ಅನುಮತಿ ನೀಡಿದ ನಂತರ ಯಾರು ತಡೆಯುತ್ತಾರೋ ನಾನು ನೋಡ್ತೀನಿ ಎಂದು ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ್ರು.