ಬಿಜೆಪಿ ಕುತಂತ್ರದ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಗರಂ
ಬೆಂಗಳೂರು; ಬಿಜೆಪಿಯವರು ರಾಹುಲ್ ಗಾಂಧಿ ವಿರುದ್ಧ ಕುತಂತ್ರ ಮಾಡುತ್ತಿದ್ದಾರೆ. ಅವರ ಕುತಂತ್ರ ರಾಜಕೀಯದಿಂದಲೇ ರಾಹುಗಾಂಧಿಯವರು ಸಂಸತ್ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮೌನ ಪ್ರತಿಭಟನೆ ನಂತರ ಮಾತನಾಡಿದ ಅವರು, ಬಿಜೆಪಿ ಕುತಂತ್ರದಿಂದ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ವಜಾ ಆಗಿದ್ದಾರೆ ಎಂದಿದ್ದಾರೆ.
9 ವರ್ಷದಿಂದ ನೆಹರು ಕುಟುಂಬ ಮೇಲೆ ಬಿಜೆಪಿಯವರು ಗದಾಪ್ರಹಾರ ಮಾಡ್ತಿದ್ದಾರೆ. ಆದ್ರೆ ನಾವು ಯಾವುದಕ್ಕೂ ಹೆದರೋದಿಲ್ಲ. ರಾಹುಲ್ ಗಾಂಧಿ ಬೆಂಬಲಕ್ಕೆ ನಾವಿದ್ದೇವೆ. ಇಡೀ ದೇಶ ಅವರ ಬೆನ್ನಿಗಿದೆ ಎಂದು ಹೇಳಿದರು.